covid-19 updates

ಬೆಂಗಳೂರು ( ಜೂ.18): ರಾಜ್ಯದಲ್ಲಿ ಕೊರೊನಾ ಆರ್ಭಟ ಮುಂದುವರೆದಿದ್ದು, 12 ಜನರನ್ನು ಬಲಿ ಪಡೆದಿದೆ. ಇದಲ್ಲದೇ ಇಂದು ಒಂದೇ ದಿನದಲ್ಲಿ 210 ಹೊಸ ಪಾಸಿಟಿವ್ ಪ್ರಕರಣಗಳು ದಾಖಲಾಗಿವೆ. ಇದರೊಂದಿಗೆ ರಾಜ್ಯದ ಒಟ್ಟು ಸೋಂಕಿತರ ಸಂಖ್ಯೆ 7944 ಕ್ಕೆ ಏರಿಕೆಯಾದಂತಾಗಿದೆ.

ಬೆಂಗಳೂರು ನಗರ ಅಕ್ಷರಶಃ ಕೊರೋನಾಗೆ ನಲುಗುತ್ತಿದ್ದು, 8 ಜನರು ಇಂದು ಒಂದೇ ದಿನದಲ್ಲಿ ಕೊರೊನಾ ಕೋವಿಡ್-19 ಸೋಂಕಿಗೆ ಬಲಿಯಾಗಿದ್ದಾರೆ. ಇನ್ನುಳಿದಂತೆ ಕೊಪ್ಪಳದ ಒಬ್ಬರು, ಬೀದರಿನ ಒಬ್ಬರು ಮತ್ತು ವಿಜಯಪುರದ ಒಬ್ಬರು ಮೃತಪಟ್ಟಿದ್ದಾರೆ.

ಇನ್ನು ಜಿಲ್ಲಾವಾರು ಸೋಂಕಿತರನ್ನು ನೋಡುವುದಾದರೆ ಬಳ್ಳಾರಿ 48, ಕಲಬುರಗಿ 48, ದಕ್ಷಿಣಕನ್ನಡ 23, ರಾಮನಗರ 21, ಬೆಂಗಳೂರು ನಗರ 17, ಯಾದಗಿರಿ 8, ಮಂಡ್ಯ 7, ಬೀದರ 6, ಗದಗ 5, ರಾಯಚೂರು 4, ಹಾಸನ 4, ಧಾರವಾಡ 4, ದಾವಣಗೆರೆ 3, ಚಿಕ್ಕಮಂಗಳೂರು 3, ವಿಜಯಪುರ 2, ಉತ್ತರ ಕನ್ನಡ 2, ಮೈಸೂರು 2, ಬಾಗಲಕೋಟೆ 1, ಕೊಪ್ಪಳ 1, ಶಿವಮೊಗ್ಗ 1 ಪ್ರಕರಣಗಳು ದಾಖಲಾಗಿವೆ.

ತಾಜಾ ಸುದ್ದಿಗಳಿಗಾಗಿ ನಮ್ಮನ್ನು ಸಾಮಾಜಿಕ ತಾಣಗಳಲ್ಲಿ ಫಾಲೋ ಮಾಡಿ
ವಾಟ್ಸಪ್ಟೆಲಿಗ್ರಾಮ್ಕೂ ಆಫ್ಫೇಸ್ ಬುಕ್ ಫೇಜ್

ಪ್ರತಿಷ್ಠಿತ ನ್ಯೂಸ್ ಆಫ್ ಗಳಲ್ಲಿ ನಮ್ಮನ್ನು ಫಾಲೋ ಮಾಡಿ
ಡೈಲಿಹಂಟ್ಗೂಗಲ್ ನ್ಯೂಸ್ 

LEAVE A REPLY

Please enter your comment!
Please enter your name here