new-corona-cases-found-in-karnataka

ಬೆಂಗಳೂರು( ಜು.8): ರಾಜ್ಯದಲ್ಲಿ ಇಂದು 2062 ಪ್ರಖರಣಗಳು ದಾಖಲಾಗಿದ್ದು, ರಾಜ್ಯವು ಕೊರೊನಾ ಮಹಾಮಾರಿಗೆ ದಿನೇ ದಿನೆ ಸ್ವಲ್ಪ ಸ್ವಲ್ಪವೇ ಬಲಿಯಾಗುತ್ತಿದೆ. ಇದರೊಂದಿಗೆ ರಾಜ್ಯದಲ್ಲಿ ಒಟ್ಟು 28,887 ಜನರಿಗೆ ಇಲ್ಲಿಯವರೆಗೆ ಸೋಂಕು ತಗುಲಿದಂತಾಗಿದೆ. ಇದರೊಂದಿಗೆ ಕೊರೊನಾ ಇಂದು 54 ಜನರನ್ನು ಬಲಿ ತೆಗೆದುಕೊಂಡಿದೆ.

ರಾಜ್ಯದಲ್ಲಿ ಸೋಂಕಿನಿಂದ ಗುಣಮುಖರಾದವರು ಎಷ್ಟು ?

ರಾಜ್ಯದಲ್ಲಿ ಇಂದು ಒಟ್ಟು 778 ಜನರು ಕೊರೊನಾ ಸೋಂಕಿನಿಂದ ಗುಣಮುಖರಾಗಿದ್ದಾರೆ. ಇದರೊಂದಿಗೆ ಇಲ್ಲಿಯವರೆಗೆ 11,876 ಜನರು ಸೋಂಕಿನಿಂದ ಪಾರಾಗಿ ಮನೆ ಸೇರಿದ್ದಾರೆ. ಇನ್ನು ಈ ಸೋಂಕಿಗೆ ಒಳಗಾಗಿ ಆಸ್ಪತ್ರೆಯಲ್ಲಿ 16,527 ಜನರು ಚಿಕಿತ್ಸೆಯನ್ನು ಪಡೆದುಕೊಳ್ಳುತ್ತಿದ್ದಾರೆ.

ಬೆಂಗಳೂರಿನ ಕರೋನಾ ಸ್ಥಿತಿ ಹೇಗಿದೆ ?

ಇಂದು ಒಂದೇ ದಿನದಲ್ಲಿ ರಾಜ್ಯದ ರಾಜಧಾನಿಯಲ್ಲಿ 1,148 ಜನರಲ್ಲಿ ಸೋಂಕು ಪತ್ತೆಯಾಗಿದೆ. ಇಂದು 418 ಜನರು ಕೊರೊನಾ ಮುಕ್ತರಾಗಿದ್ದು, ಮನೆಗಳಿಗೆ ತೆರಳಿರುತ್ತಾರೆ. ಇದರೊಂದಿಗೆ ಇಲ್ಲಿಯವರೆಗೆ 2,228 ಜನರು ಗುಣಮುಖರಾಗಿದ್ದಾರೆ. ಇನ್ನೂ 10,103 ಜನರು ಸೋಂಕಿಗೆ ತುತ್ತಾಗಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ. ಇದರೊಂದಿಗೆ 177 ಜನರು ಕೋವಿಡ್-19 ರ ಸೋಂಕಿನಿಂದ ಇಲ್ಲಿಯವರೆಗೆ ಬೆಂಗಳೂರಿನಲ್ಲಿ ಸಾವನ್ನಪ್ಪಿದ್ದಾರೆ. ಇಲ್ಲಿಯವರೆಗೆ ಬೆಂಗಳೂರು ಒಂದರಲ್ಲೇ ಕೊರೋನಾಗೆ ಒಳಗಾದವರ ಒಟ್ಟು ಸಂಖ್ಯೆ 12,509 ಕ್ಕೆ ಏರಿಕೆಯಾಗಿದೆ.

ಯಾವ ಜಿಲ್ಲೆಯಲ್ಲಿ ಎಷ್ಟು ಸೋಂಕು ?

ಇಂದು ದಾಖಲಾದ ಕೊರೊನಾ ಪ್ರಕರಣಗಳನ್ನು ಜಿಲ್ಲಾವಾರು ನೋಡುತ್ತ ಹೋದರೆ ಬೆಂಗಳೂರು 1148, ದಕ್ಷಿಣಕನ್ನಡ 183, ಧಾರವಾಡ 89, ಕಲಬುರಗಿ 66, ಮೈಸೂರು 59, ಬಳ್ಳಾರಿ 59, ಬೆಂಗಳೂರು ಗ್ರಾ 37, ರಾಮನಗರ 34, ಚಿಕ್ಕಬಳ್ಳಾಪುರ 32, ಉಡುಪಿ 31, ಹಾವೇರಿ 31, ಬೀದರ್ 29, ಬೆಳಗಾವಿ 27, ಹಾಸನ 26, ಬಾಗಲಕೋಟೆ 24, ತುಮಕೂರು 24, ಚಿಕ್ಕಮಗಳೂರು 23, ಮಂಡ್ಯ 20, ಉತ್ತರಕನ್ನಡ 19, ದಾವಣಗೆರೆ 18, ರಾಯಚೂರು 17, ಶಿವಮೊಗ್ಗ 17, ಕೋಲಾರ 16, ಯಾದಗಿರಿ 11, ಕೊಪ್ಪಳ 11, ಗದಗ 05, ವಿಜಯಪುರ 04, ಚಿತ್ರದುರ್ಗ 02 ಸೋಂಕಿನ ಪ್ರಖರಣಗಳು ಪತ್ತೆಯಾಗಿವೆ.

ಇಂದಿನ ಪತ್ರಿಕಾ ಪ್ರಕಟಣೆ 08/07/2020.
ಸಂಪೂರ್ಣ ಪತ್ರಿಕಾ ಪ್ರಕಟಣೆಗಾಗಿ ಕೆಳಗೆ ಈ ಲಿಂಕನ್ನು ಕ್ಲಿಕ್ ಮಾಡಿ.https://t.co/V37Ik5jcm8@BMTC_BENGALURU @NammaBESCOM @tv9kannada @publictvnews @suvarnanewstv @timesofindia @prajavani @udayavani_web @TV5kannada @Vijaykarnataka @VVani4U pic.twitter.com/nZBsV5pKOj

— K’taka Health Dept (@DHFWKA) July 8, 2020

LEAVE A REPLY

Please enter your comment!
Please enter your name here