ಬೆಂಗಳೂರು (ಜೂನ್ 17): ರಾಜ್ಯದಲ್ಲಿ ಕೊರೊನಾ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದ್ದು, ಇಂದು 204 ಪಾಸಿಟಿವ್ ಪ್ರಖರಣಗಳು ಬೆಳಕಿಗೆ ಬಂದಿವೆ. ಒಂದೇ ದಿನಕ್ಕೆ 8 ಜನರು ಸಾವನ್ನಪ್ಪುವ ಮೂಲಕ ರಾಜ್ಯದಲ್ಲಿ ಸೋಂಕಿಗೆ ಇಲ್ಲಿಯವರೆಗೆ ಬಲಿಯಾದವರ ಸಂಖ್ಯೆ 102 ಕ್ಕೆ ಏರಿಕೆಯಾದಂತಾಗಿದೆ.
ಕೊರೊನಾ ವೈರಸ್ ನಿಂದ ಸಾಯುವವರ ಸಂಖ್ಯೆಯು ಪ್ರತಿದಿನ ಹೆಚ್ಚುತ್ತಲೇ ಇದ್ದು, ಇಂದು ಬೆಂಗಳೂರಿನ 39 ವರ್ಷದ ಮಹಿಳೆ, 69 ವರ್ಷದ ಮಹಿಳೆ, 61 ವರ್ಷದ ವ್ಯಕ್ತಿ, 64 ವರ್ಷದ ವ್ಯಕ್ತಿ, 90 ವರ್ಷದ ವ್ಯಕ್ತಿಗಳು ಮೃತರಾಗಿದ್ದಾರೆ. ಇನ್ನು ಬೀದರಿನ 26 ವರ್ಷದ ಮಹಿಳೆ, ಶಿವಮೊಗ್ಗದ 56 ವರ್ಷದ ಮಹಿಳೆ ಹಾಗೂ ಬಳ್ಳಾರಿಯ 62 ವರ್ಷದ ಮಹಿಳೆ ಕೊನೆಯುಸಿರು ಎಳೆದಿದ್ದಾರೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.
ರಾಜ್ಯದಲ್ಲಿ ಕೋವಿಡ್-19 ಸೋಂಕಿಗೆ ಬಲಿಯಾದವರ ಜಿಲ್ಲಾವಾರು ಸಂಖ್ಯೆಯು ಈ ರೀತಿಯಾಗಿದೆ – ಬೆಂಗಳೂರು ನಗರ 55, ಯಾದಗಿರಿ 37, ಬಳ್ಳಾರಿ 29, ಕಲಬುರಗಿ 19, ಬೀದರ 12, ದಕ್ಷಿಣ ಕನ್ನಡ 8, ಧಾರವಾಡ 8, ಮಂಡ್ಯ 7, ಹಾಸನ 5, ಉಡುಪಿ 4, ಶಿವಮೊಗ್ಗ 4, ಶಿವಮೊಗ್ಗ 4, ದಾವಣಗೆರೆ 3, ಚಿಕ್ಕಬಳ್ಳಾಪುರ 3, ಉತ್ತರ ಕನ್ನಡ 3, ಮೈಸೂರು 1, ರಾಯಚೂರು 1, ಬೆಂಗಳೂರು ಗ್ರಾಮಾಂತರ 1 ಪ್ರಕರಣಗಳು ಬೆಳಕಿಗೆ ಬಂದಿವೆ.
ಸೋಂಕಿತರ ಸಂಖ್ಯೆಯು ಹೆಚ್ಚಳವಾಗುತ್ತಿದ್ದಂತೆಯೇ ಗುಣಮುಖರಾಗುವವರ ಸಂಖ್ಯೆಯೂ ಹೆಚ್ಚುತ್ತಿದೆ. ಇಂದು ರಾಜ್ಯದಲ್ಲಿ 348 ಜನರು ಗುಣಮುಖರಾಗಿದ್ದಾರೆ. ಇದರೊಂದಿಗೆ ಇಲ್ಲಿಯವರೆಗೆ ಆರೋಗ್ಯವಂತರಾಗಿ ಮನೆಗೆ ತೆರಲಿದವರ ಸಂಖ್ಯೆ 4804 ಕ್ಕೆ ಏರಿದೆ. ಒಟ್ಟು ಕರ್ನಾಟಕದ 7734 ಸೋಂಕಿತರಲ್ಲಿ ಇನ್ನೂ ಸಕ್ರೀಯರಾಗಿ 2824 ಜನರು ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ.
ಕೋವಿಡ್19 ಮಾಹಿತಿ: 17ನೇ ಜೂನ್ 2020
ಒಟ್ಟು ಪ್ರಕರಣಗಳು: 7734
ಮೃತಪಟ್ಟವರು: 102
ಗುಣಮುಖರಾದವರು: 4804
ಹೊಸ ಪ್ರಕರಣಗಳು: 204ಇತರೆ ಮಾಹಿತಿ: ಜಿಲ್ಲಾವಾರು ಸೋಂಕಿತರು, ಟೆಲಿಮೆಡಿಸಿನ್ ಸೌಲಭ್ಯದ ಮಾಹಿತಿ, ಕೊರೊನ ನಿಗಾ ಅಪ್ಲಿಕೇಶನ್ ಹಾಗೂ ಸಹಾಯವಾಣಿ ವಿವರಗಳಿವೆ.1/2 pic.twitter.com/GX0vfSyaW3
— CM of Karnataka (@CMofKarnataka) June 17, 2020