ಬೆಂಗಳೂರು (ಜೂನ್ 11): ರಾಜ್ಯದಲ್ಲಿಂದು ಹೊಸದಾಗಿ 204 ಕೋವಿಡ್-19 ಪಾಸಿಟಿವ್ ಪ್ರಖರಣಗಳು ಬೆಳಕಿಗೆ ಬಂದಿವೆ. ಇದರೊಂದಿಗೆ ರಾಜ್ಯದಲ್ಲಿ ಕೊರೊನಾಗೆ ಬಲಿಯಾಗುವವರ ಸಂಖ್ಯೆಯೂ ದಿನೇ ದಿನೆ ಹೆಚ್ಚುತ್ತಲೇ ಇದೆ. ಇಂದು ಮೂವರು ಬಲಿಯಾಗುವ ಮೂಲಕ ರಾಜ್ಯದಲ್ಲಿ ಒಟ್ಟು ಸಾವಿನ ಸಂಖ್ಯೆ 72 ಕ್ಕೆ ಏರಿಕೆಯಾದಂತಾಗಿದೆ.
ಚಿಕ್ಕಮಗಳೂರು ಜಿಲ್ಲೆಯಲ್ಲಿ SSLC ವಿಧ್ಯಾರ್ಥಿಯೋರ್ವನಿಗೆ ಸೋಂಕು ಖಚಿತವಾಗುವ ಮೂಲಕ ತೀವ್ರ ಆತಂಕವನ್ನು ಉಂಟುಮಾಡಿದೆ. ಇನ್ನುಳಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಒಟ್ಟು 204 ಪ್ರಕರಣಗಳು ಇಂದು ದಾಖಲಾಗಿದೆ. ರಾಜ್ಯದ ಒಟ್ಟು ಸೋಂಕಿತರ ಸಂಖ್ಯೆ ಇಲ್ಲಿಯವರೆಗೆ 6245 ಕ್ಕೆ ಏರಿಕೆಯಾದಂತಾಗಿದೆ.
ಇಂದು ಪತ್ತೆಯಾದ ಸೋಂಕಿತರಲ್ಲಿ 157 ಜನರು ಅಂತರಾಜ್ಯ ಪ್ರಯಾಣದ ಹಿನ್ನೆಲೆಯನ್ನು ಹೊಂದಿದ್ದಾರೆ. ಅಲ್ಲದೇ ಇಂದು ಕೊರೊನಾ ಸೋಂಕಿನಿಂದಾಗಿ ಮೂವರು ಮೃತಪಟ್ಟಿದ್ದು, ಬೆಂಗಳೂರಿನ 35 ವರ್ಷದ ವ್ಯಕ್ತಿ ದೀರ್ಘಕಾಲದ ಲಿವರ್ ಸಮಸ್ಯೆಯಿಂದ ಬಳಲುತ್ತಿದ್ದರು. ಇವರು ಜ್ವರ ಲಕ್ಷಣಗಳಿಂದಾಗಿ ಆಸ್ಪತ್ರಗೆ ದಾಖಲಾಗಿ ಚಿಕಿತ್ಸೆ ಫಲಕಾರಿಯಾಗದೆ ಬುಧವಾರ ಮೃತ ಪಟ್ಟಿದ್ದರು.
ಕೋವಿಡ್19 ಮಾಹಿತಿ: 11ನೇ ಜೂನ್ 2020
— CM of Karnataka (@CMofKarnataka) June 11, 2020
ಒಟ್ಟು ಪ್ರಕರಣಗಳು: 6245
ಮೃತಪಟ್ಟವರು: 72
ಗುಣಮುಖರಾದವರು: 2976
ಹೊಸ ಪ್ರಕರಣಗಳು: 204
ಇತರೆ ಮಾಹಿತಿ: ಜಿಲ್ಲಾವಾರು ಸೋಂಕಿತರು, ಟೆಲಿಮೆಡಿಸಿನ್ ಸೌಲಭ್ಯದ ಮಾಹಿತಿ, ಕೊರೊನ ನಿಗಾ ಅಪ್ಲಿಕೇಶನ್ ಹಾಗೂ ಸಹಾಯವಾಣಿ ವಿವರಗಳಿವೆ.1/2 pic.twitter.com/YLMznO1lnv
ಇನ್ನು ಬೆಂಗಳೂರು ನಗರದ 60 ವರ್ಷದ ವ್ಯಕ್ತಿ ಕೂಡಾ ಜ್ವರದ ಲಕ್ಷಣಗಳಿಂದ ಬಳಲುತ್ತಿದ್ದು, ಚಿಕಿತ್ಸೆಗೆ ಸ್ಪಂದಿಸದೇ ಕೊನೆಯುಸಿರೆಳೆದಿದ್ದಾರೆ. ರಾಯಚೂರಿನ 28 ವರ್ಷದ ಮಹಿಳೆ ಬೀದರ್ ಜಿಲ್ಲೆಗೆ ಬೇಟಿ ನೀಡಿ, ನಂತರದಲ್ಲಿ ಜ್ವರ ಕಾಣಿಸಿಕೊಂಡಿತ್ತು. ಆಸ್ಪತೆಗೆ ದಾಖಲಾದ ಇವರು ತೀವ್ರ ಉಸಿರಾಟದ ಸಮಸ್ಯೆಯಿಂದಾಗಿ ಮೃತ ಪಟ್ಟಿರುತ್ತಾರೆ ಎಂದು ಇಲಾಖೆ ಮಾಹಿತಿ ನೀಡಿದೆ.
ಇಂದು ಸೋಂಕಿಗೆ ಒಳಗಾದವರ ಜಿಲ್ಲಾವಾರು ಸಂಖ್ಯೆಯನ್ನು ನೋಡುವುದಾದರೆ ಯಾದಗಿರಿ 66, ಉಡುಪಿ 22, ಬೆಂಗಳೂರು ನಗರ 17, ಕಲಬುರಗಿ 16, ರಾಯಚೂರು 15, ಬೀದರ್ 14, ಶಿವಮೊಗ್ಗ 10, ವಿಜಯಪುರ 04, ಧಾರವಾಡ 2, ದಕ್ಷಿಣ ಕನ್ನಡ 2, ದಾವಣಗೆರೆ 9, ಕೋಲಾರ 6, ರಾಮನಗರ 5, ಮೈಸೂರು 5, ಬಾಗಲಕೋಟೆ 3, ಉತ್ತರ ಕನ್ನಡ 3, ಹಾಸನ 2, ಬೆಂಗಳೂರು ಗ್ರಾಮಾಂತರ 1, ಚಿಕ್ಕಮಗಳೂರು 1, ಕೊಪ್ಪಳ 1 ಪ್ರಕರಣಗಳು ದಾಖಲಾಗಿವೆ.