2-key-farm-bills-passed-in-rs-amid-slogans

ನವದೆಹಲಿ: ರಾಜ್ಯಸಭೆಯಲ್ಲಿ ಇಂದು ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೂ ರೈತರ ಉತ್ಪನ್ನ ಮಾರಾಟ ಮತ್ತು ವ್ಯವಹಾರ, ರೈತರ ಬೆಲೆ ಭರವಸೆ ಮತ್ತು ಕೃಷಿ ಸೇವೆ ಮಸೂದೆ 2020 ಧ್ವನಿಮತದ ಮೂಲಕ ಅಂಗೀಕಾರವಾಗಿದೆ.

ರೈತರ ಉತ್ಪನ್ನ ಮಾರಾಟ ಮತ್ತು ವ್ಯವಹಾರ ಮಸೂದೆ (ಪ್ರಚಾರ ಮತ್ತು ಸೌಲಭ್ಯ) 2020 ಮತ್ತು ರೈತರ ಬೆಲೆ ಭರವಸೆ ಮತ್ತು ಕೃಷಿ ಸೇವೆ (ಸಬಲೀಕರಣ ಮತ್ತು ಸಂರಕ್ಷಣೆ ಮಸೂದೆ) ಗಳ ಮಸೂದೆ 2020 ನ್ನು ಕೇಂದ್ರ ಸರಕಾರ ಇಂದು ಯಶಸ್ವಿಯಾಗಿ ಅನುಮೋದನೆಯನ್ನು ಪಡೆದುಕೊಂಡಿತು.

ಈ ಸಮಯದಲ್ಲಿ ಮಾತನಾಡಿದ ತೋಮರ್, ಈ ಮಸೂದೆಗಳು ಐತಿಹಾಸಿಕವಾಗಿದ್ದು, ರೈತರ ಬಾಳಲ್ಲಿ ಮಹತ್ತರವಾದ ಬದಲಾವಣೆಯನ್ನು ತರಲಿವೆ. ರೈತರು ತಾವು ಬೆಳೆದ ಬೆಲೆಯನ್ನು ಎಲ್ಲಿಬೇಕಾದರೂ ಮುಕ್ತವಾಗಿ  ಮಾರಾಟ ಮಾಡಲು ಈ ಮಸೂದೆ ಸಹಕಾರಿಯಾಗಲಿದೆ. ಇದು ರೈತರ ಸಮಸ್ಯೆಗಳನ್ನು ಕೊನೆಗೊಳಿಸಲಿದೆ ಎಂದು ಹೇಳಿದರು.

ಈ ಮಸೂದೆಗೆ ಕಾಂಗ್ರೆಸ್, ತೃಣಮೂಲ ಕಾಂಗ್ರೆಸ್, ಆಮ್ ಆದ್ಮಿ ಸೇರಿದಂತೆ ಹಲವು ಪಕ್ಷಗಳು ವಿರೋಧ ವ್ಯಕ್ತಪಡಿಸಿವೆ. “ದೇಶದ ಬೆನ್ನೆಲುಬಾಗಿರುವ ರೈತರನ್ನು ಗುಲಾಮರನಾಗಿಸಲಿದೆ. ಇದು ರೈತರನ್ನು ಹತ್ಯೆ ಮಾಡಿ ಸರಕಾಗಿಸುತ್ತದೆ” ಎಂದು ಡಿಎಂಕೆ ಅಭಿಪ್ರಾಯ ವ್ಯಕ್ತಪಡಿಸಿದೆ.

“ಆಡಳಿತ ಪಕ್ಷವು ಮಸೂದೆಯ ಕುರಿತು ಚರ್ಚೆ ಮಾಡಲು ಬಯಸುತ್ತಿಲ್ಲ. ಅಲ್ಲದೇ ಇವರು ಯಾವುದೇ ಕೃಷಿ ಸಂಘಟನೆಗಳ ಬಳಿಯಲ್ಲಿಯೂ ಚರ್ಚೆಯನ್ನು ಮಾಡಿಲ್ಲ” ಎಂದು ಸಮಾಜವಾದಿ ಪಕ್ಷದ ರಾಮ್ ಗೋಪಾಲ್ ಯಾದವ್ ಹೇಳಿದ್ದಾರೆ.

ಇನ್ನು ಕಾಂಗ್ರೆಸ್ ಮಸೂದೆ ಕುರಿತಂತೆ ” ಈ ಮಸೂದೆಯನ್ನು ಕಾಂಗ್ರೆಸ್ ವಿರೋದಿಸುತ್ತದೆ. ಇದು ರೈತರ ಡೆತ್ ವಾರೆಂಟ್ ಆಗಿದ್ದು, ನಾವು ಸಹಿ ಮಾಡುವುದಿಲ್ಲ ಎಂದು ಹೇಳಿದೆ.

ಇದನ್ನೂ ಓದಿರಿ: ಚೀನಾದ ಮೊಬೈಲ್ ಹ್ಯಾಂಡ್ ಸೆಟ್ಗಳನ್ನ ಬ್ಯಾನ್ ಮಾಡಲಿದೆಯೇ ಕೇಂದ್ರ ?

ತಾಜಾ ಸುದ್ದಿಗಳಿಗಾಗಿ ನಮ್ಮನ್ನು ಸಾಮಾಜಿಕ ತಾಣಗಳಲ್ಲಿ ಫಾಲೋ ಮಾಡಿ
ವಾಟ್ಸಪ್ಟೆಲಿಗ್ರಾಮ್ಕೂ ಆಫ್ಫೇಸ್ ಬುಕ್ ಫೇಜ್

ಪ್ರತಿಷ್ಠಿತ ನ್ಯೂಸ್ ಆಫ್ ಗಳಲ್ಲಿ ನಮ್ಮನ್ನು ಫಾಲೋ ಮಾಡಿ
ಡೈಲಿಹಂಟ್ಗೂಗಲ್ ನ್ಯೂಸ್ 

LEAVE A REPLY

Please enter your comment!
Please enter your name here