2-dg-price-drdo-covid19-medicine-launch

ಕೊರೋನಾ ದೇಶದಲ್ಲಿ ತಾಂಡವಾಡುತ್ತಿದ್ದಂತೆ ಅದನ್ನು ಕಟ್ಟಿಹಾಕಲು ಭಾರತೀಯ ವಿಜ್ಞಾನಿಗಳ ತಂಡ 2-DG ಎಂಬ ಹೊಸ ಮಾತ್ರೆಯನ್ನು ತಯಾರಿಸಿರುವ ಕುರಿತು ನಿಮಗೆಲ್ಲ ತಿಳಿದಿದೆ. ಡಿ ಆರ್ ಡಿ ಓ ಮತ್ತು ಡಾ. ರೆಡ್ಡಿಸ್ ಲ್ಯಾಬೊರೇಟರೀಸ್ ಜಂಟಿಯಾಗಿ ಅಭಿವೃದ್ಧಿಪಡಿಸಿದ ‘2-DG’ ಮಾತ್ರೆಗೆ ಇದೀಗ ಬೆಲೆಯನ್ನು ನಿಗದಿಗೊಳಿಸಲಾಗಿದೆ.

ದೇಶಿಯಿಯ 2-DG ಮಾತ್ರೆಗೆ ಪ್ರತಿ ಪ್ಯಾಕೆಟ್ಗೆ 990 ರೂಪಾಯಿ ದರವನ್ನು ನಿಗದಿಗೊಳಿಸಲಾಗಿದ್ದು, ಸರ್ಕಾರಿ ಆಸ್ಪತ್ರೆಗಳಿಗೆ ಔಷಧ ತಯಾರಿಕಾ ಕಂಪನಿಗಳು ರೀಯಾಯಿತಿ ದರದಲ್ಲಿ ಪೂರೈಕೆ ಮಾಡುವುದಾಗಿ ತಿಳಿಸಿವೆ. 2 ಡಿ ಜಿ ಕೊರೋನಾ ವಿರುದ್ಧ ಹೋರಾಡಲು ಸಹಾಯಕವಾಗುವ ಮಾತ್ರೆಯಾಗಿದೆ. ಈ ಮಾತ್ರೆಯು ಮೇ ತಿಂಗಳ 17 ರಂದು ಬಿಡುಗಡೆಯಾಗಿದ್ದು, ಕೊರೋನಾ ಸೋಂಕಿತರ ಮೇಲೆ ಯಾವರೀತಿಯಲ್ಲಿ ಪರಿಣಾಮ ಬೀರಲಿದೆ, ಈ ಮಾತ್ರೆಯು ರೋಗದಿಂದ ಬಳಲುತ್ತಿರುವವರಿಗೆ ಸಹಾಯಕವಾಗಲಿದೆ ಎಂಬೆಲ್ಲ ಕುರಿತಾಗಿ ಕುತೂಹಲ ಮೂಡಿಸಿದೆ.

ಇದನ್ನೂ ಓದಿರಿ: ನಿಮ್ಮ ಊರಿನಲ್ಲಿ ಎಷ್ಟು ಕೊರೋನಾ ಸೋಂಕಿತರಿದ್ದಾರೆ ಎಂದು ತಿಳಿಯಬೇಕೇ? ಹಾಗಾದರೆ ಈ ಸುದ್ದಿ ನೋಡಿ !

ಡಾ. ರೆಡ್ಡಿಸ್ ಲ್ಯಾಬೊರೇಟರೀಸ್ ನಿನ್ನೆ ಎರಡನೆಯ ಬ್ಯಾಚ್ ರೂಪದಲ್ಲಿ 10,000 ಸ್ಯಾಚೆಟ್ ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿ, ಈ ಮಾತ್ರೆಯು ಜೂನ್ ಹದಿನೈದರ ನಂತರ ಮಾರುಕಟ್ಟೆಯಲ್ಲಿ ಲಭ್ಯವಾಗುವಷ್ಟು ಉತ್ಪಾದನೆಯನ್ನು ಮಾಡಲಾಗುವುದು. ಈಗಾಗಲೆ ಮಾತ್ರೆಯ ತಯಾರಿಕೆಯನ್ನು ದೊಡ್ಡ ಪ್ರಮಾಣದಲ್ಲಿ ಆರಂಭಿಸಲಾಗಿದ್ದು, ಕೆಲವೇ ದಿನಗಳಲ್ಲಿ ಜನಸಾಮಾನ್ಯರಿಗೆ ಲಭ್ಯವಾಗಲಿದೆ ಎಂದು ಹೇಳಿದ್ದಾರೆ.

LEAVE A REPLY

Please enter your comment!
Please enter your name here