20378-new-covid-cases-found-in-karnataka

ಬೆಂಗಳೂರು: ರಾಜ್ಯದಲ್ಲಿ ಇಂದು 1,977 ಕೊರೋನಾ ಸೋಂಕಿತರು ಹೊಸದಾಗಿ ಪತ್ತೆಯಾಗಿದ್ದು, ಇದರೊಂದಿಗೆ ಒಟ್ಟಾರೆಯಾಗಿ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 28,78,564 ಕ್ಕೆಏರಿಕೆಯಾಗಿದೆ.

ಕಳೆದ 24 ಗಂಟೆಗಳಲ್ಲಿ ಬೆಂಗಳೂರು ನಗರದಲ್ಲಿ 462 ಸೋಂಕಿತರು ಪತ್ತೆಯಾಗಿದ್ದಾರೆ. ಇದಲ್ಲದೇ ಕೊರೋನಾ 10 ಜನರ ಪ್ರಾಣವನ್ನು ಬಲಿಪಡೆದುಕೊಂಡಿದೆ.

ರಾಜ್ಯದಲ್ಲಿ ಇಂದು  3,188 ಸೋಂಕಿತರು ಗುಣಮುಖರಾಗಿ ಮನೆಗೆ ತೆರಳಿದ್ದಾರೆ. ರಾಜ್ಯದಲ್ಲಿ ಒಟ್ಟಾರೆಯಾಗಿ ಇಂದು ಒಂದೇ ದಿನದಲ್ಲಿ 48 ಜನರು ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ. ಇನ್ನುಳಿದಂತೆ 32,383 ಸಕ್ರೀಯ ಪ್ರಕರಣಗಳು ರಾಜ್ಯದಲ್ಲಿವೆ.

ಇದನ್ನೂ ಓದಿರಿ: ಸ್ವಾತಂತ್ರ್ಯ ಬಂದು 74 ವರ್ಷಗಳ ಬಳಿಕ ಕೊನೆಗೂ ವಿದ್ಯುತ್ ಸಂಪರ್ಕ ಪಡೆದ ಕಾಶ್ಮೀರದ ಹಳ್ಳಿ

ಜಿಲ್ಲಾವಾರು ಸೋಂಕಿತರ ಸಂಖ್ಯೆ:

ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪತ್ತೆಯಾದ ಸೋಂಕಿತರ ಸಂಖ್ಯೆಯನ್ನು ನೋಡುವುದಾದರೆ, ಬಾಗಲಕೋಟೆ 4, ಬಳ್ಳಾರಿ 5, ಬೆಳಗಾವಿ 94, ಬೆಂಗಳೂರು ಗ್ರಾಮಾಂತರ 56, ಬೆಂಗಳೂರು ನಗರ 462, ಬೀದರ್ 2, ಚಾಮರಾಜನಗರ 31, ಚಿಕ್ಕಬಳ್ಳಾಪುರ 27, ಚಿಕ್ಕಮಗಳೂರು 109, ಚಿತ್ರದುರ್ಗ 27, ದಕ್ಷಿಣ ಕನ್ನಡ 224, ದಾವಣಗೆರೆ 23, ಧಾರವಾಡ 12, ಗದಗ 2, ಹಾಸನ 158, ಹಾವೇರಿ 2, ಕಲಬುರಗಿ 8, ಕೊಡಗು 73, ಕೋಲಾರ 36, ಕೊಪ್ಪಳ 3, ಮಂಡ್ಯ 51, ಮೈಸೂರು 197, ರಾಯಚೂರು 4, ರಾಮನಗರ 16, ಶಿವಮೊಗ್ಗ 71, ತುಮಕೂರು 86, ಉಡುಪಿ 110, ಉತ್ತರ ಕನ್ನಡ 71, ವಿಜಯಪುರ 11, ಯಾದಗಿರಿಯಲ್ಲಿ 2 ಪ್ರಕರಣಗಳು ವರದಿಯಾಗಿದೆ.

ತಾಜಾ ಸುದ್ದಿಗಳಿಗಾಗಿ ನಮ್ಮನ್ನು ಸಾಮಾಜಿಕ ತಾಣಗಳಲ್ಲಿ ಫಾಲೋ ಮಾಡಿ
ವಾಟ್ಸಪ್ಟೆಲಿಗ್ರಾಮ್ಕೂ ಆಫ್ಫೇಸ್ ಬುಕ್ ಫೇಜ್

ಪ್ರತಿಷ್ಠಿತ ನ್ಯೂಸ್ ಆಫ್ ಗಳಲ್ಲಿ ನಮ್ಮನ್ನು ಫಾಲೋ ಮಾಡಿ
ಡೈಲಿಹಂಟ್ಗೂಗಲ್ ನ್ಯೂಸ್ 

LEAVE A REPLY

Please enter your comment!
Please enter your name here