ಬೆಂಗಳೂರು( ಜು.5): ರಾಜ್ಯದಲ್ಲಿ ಇಂದು 1925 ಪ್ರಖರಣಗಳು ದಾಖಲಾಗಿದ್ದು, ರಾಜ್ಯದ ಜನರನ್ನು ಬೆಚ್ಚಿ ಬೀಳುವಂತೆ ಮಾಡಿದೆ. ಇದರೊಂದಿಗೆ ರಾಜ್ಯದಲ್ಲಿ 23,474 ಜನರಿಗೆ ಇಲ್ಲಿಯವರೆಗೆ ಸೋಂಕು ತಗುಲಿದಂತಾಗಿದೆ. ಇಂದು ಆಘಾತ ಉಂಟುಮಾಡುವಂತೆ ಕೋವಿಡ್-19 ರ ಸೋಂಕಿನಿಂದ 32 ಜನರು ಸಾವನ್ನಪ್ಪಿದ್ದಾರೆ.

ಬೆಂಗಳೂರಿನ ಕರೋನಾ ಸ್ಥಿತಿ ಹೇಗಿದೆ ?

ಇಂದು ಒಂದೇ ದಿನದಲ್ಲಿ ರಾಜ್ಯದ ರಾಜಧಾನಿಯಲ್ಲಿ 1,235 ಜನರಲ್ಲಿ ಸೋಂಕು ಪತ್ತೆಯಾಗಿದೆ. ಇಂದು 302 ಜನರು ಕೊರೊನಾ ಮುಕ್ತರಾಗಿದ್ದು, ಮನೆಗಳಿಗೆ ತೆರಳಿರುತ್ತಾರೆ. ಇದರೊಂದಿಗೆ ಇಲ್ಲಿಯವರೆಗೆ 1,267 ಜನರು ಗುಣಮುಖರಾಗಿದ್ದಾರೆ. ಇನ್ನೂ 8,167 ಜನರು ಸೋಂಕಿಗೆ ತುತ್ತಾಗಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ. ಇದರೊಂದಿಗೆ 145 ಜನರು ಕೋವಿಡ್-19 ರ ಸೋಂಕಿನಿಂದ ಇಲ್ಲಿಯವರೆಗೆ ಬೆಂಗಳೂರಿನಲ್ಲಿ ಸಾವನ್ನಪ್ಪಿದ್ದಾರೆ.

ಯಾವ ಜಿಲ್ಲೆಯಲ್ಲಿ ಎಷ್ಟು ಸೋಂಕು ?

ಇಂದು ದಾಖಲಾದ ಕೊರೊನಾ ಪ್ರಕರಣಗಳನ್ನು ಜಿಲ್ಲಾವಾರು ನೋಡುತ್ತ ಹೋದರೆ, ಬೆಂಗಳೂರುನಗರ 1235, ದಕ್ಷಿಣಕನ್ನಡ 147, ಬಳ್ಳಾರಿ 90, ವಿಜಯಪುರ 51, ಕಲಬುರಗಿ 49, ಉಡುಪಿ 45, ಧಾರವಾಡ 45, ಬೀದರ್ 29, ಮೈಸೂರು 25, ಕೊಪ್ಪಳ 22, ಉತ್ತರಕನ್ನಡ 21, ಚಾಮರಾಜನಗರ 19, ಹಾವೇರಿ 15, ಹಾಸನ 14, ಚಿಕ್ಕಬಳ್ಳಾಪುರ 13, ತುಮಕೂರು 13, ಕೋಲಾರ 13, ಬೆಳಗಾವಿ 11, ದಾವಣಗೆರೆ 11, ರಾಯಚೂರು 10, ಮಂಡ್ಯ 10, ಚಿಕ್ಕಮಗಳೂರು 09, ಶಿವಮೊಗ್ಗ 08, ಗದಗ 07, ರಾಮನಗರ 06, ಬಾಗಲಕೋಟೆ 04, ಚಿತ್ರದುರ್ಗ 03 ಸೋಂಕಿನ ಪ್ರಖರಣಗಳು ಪತ್ತೆಯಾಗಿವೆ.

ರಾಜ್ಯದಲ್ಲಿ ಸೋಂಕಿನಿಂದ ಗುಣಮುಖರಾದವರು ಎಷ್ಟು ?

ರಾಜ್ಯದಲ್ಲಿ ಇಂದು ಒಟ್ಟು 603 ಜನರು ಕೊರೊನಾ ಸೋಂಕಿನಿಂದ ಗುಣಮುಖರಾಗಿದ್ದಾರೆ. ಇದರೊಂದಿಗೆ ಇಲ್ಲಿಯವರೆಗೆ 9,847 ಜನರು ಸೋಂಕಿನಿಂದ ಪಾರಾಗಿ ಮನೆ ಸೇರಿದ್ದಾರೆ. ಇನ್ನು ಈ ಸೋಂಕಿಗೆ ಒಳಗಾಗಿ ಆಸ್ಪತ್ರೆಯಲ್ಲಿ 13,251 ಜನರು ಚಿಕಿತ್ಸೆಯನ್ನು ಪಡೆದುಕೊಳ್ಳುತ್ತಿದ್ದಾರೆ.

ರಾಜ್ಯದಲ್ಲಿ ಸಾವಿನ ಸಂಖ್ಯೆಯೆಷ್ಟು ಗೊತ್ತೇ ?

ರಾಜ್ಯದಲ್ಲಿ ಇಂದು ಒಂದೇ ದಿನದಲ್ಲಿ 37 ಕೊರೊನಾ ಸೋಂಕಿನಿಂದ ಸಾವಾಗಿದೆ. ಯಾವ ಯಾವ ಜಿಲ್ಲೆಯಲ್ಲಿ ಎಷ್ಟು ಎಂದು ನೋಡುವುದಾದರೆ ಬೆಂಗಳೂರು ನಗರ 16, ಬೀದರ್ 9, ದಾವಣಗೆರೆ 2, ಕಲಬುರಗಿ 2, ಚಿಕ್ಕಬಳ್ಳಾಪುರ 1, ಹಾಸನ 1,  ಬಳ್ಳಾರಿ 1 ಸಾವಾಗಿದೆ ಎಂದು ಆರೋಗ್ಯ ಇಲಾಖ್ಯೆಯ ಬುಲೆಟಿನ್ ತಿಳಿಸಿದೆ.

ಜಿಲ್ಲಾವಾರು ಐಸಿಯುನಲ್ಲಿ ಇರುವವರೆಷ್ಟು ?

ಕೊರೊನಾ ಸೋಂಕಿಗೆ ಒಳಗಾಗಿ ತೀವ್ರ ಅನಾರೋಗ್ಯದಲ್ಲಿ ಇರುವವರನ್ನು ಐಸಿಯು ಘಟಕಕ್ಕೆ ಸ್ಥಲಾಂತರಿಸಲಾಗುತ್ತದೆ. ಹೀಗೆ ಸ್ಥಳಾಂತರಗೊಂಡ ಜನರ ಜಿಲ್ಲಾವಾರು ಮಾಹಿತಿ ಇಲ್ಲಿದೆ. ಬೆಂಗಳೂರು 132, ಧಾರವಾಡ 15, ಕಲಬುರಗಿ 12, ಬಳ್ಳಾರಿ 10, ರಾಯಚೂರು 10, ಹಾಸನ 8, ಮೈಸೂರು 7, ಬೀದರ್ 6, ದಕ್ಷಿಣ ಕನ್ನಡ 6, ಗದಗ 5, ಶಿವಮೊಗ್ಗ 5, ಕೋಲಾರ 4, ದಾವಾಣಗೆರೆ 3, ತುಮಕೂರು 3, ಬಾಗಲಕೋಟೆ 3, ಕೊಡಗು 3, ಬೆಳಗಾವಿ 2, ಚಾಮರಾಜನಗರ 2, ಕೊಪ್ಪಳ 2, ಮಂಡ್ಯ 2, ಉಡುಪಿ 2, ಉತ್ತರ ಕನ್ನಡ 1 ಪ್ರಖರಣಗಳು ಚಿಕಿತ್ಸೆಗೆ ಒಳಗಾಗಿವೆ.

LEAVE A REPLY

Please enter your comment!
Please enter your name here