1843-new-covid-19-cases-reported-in-karnataka

ಬೆಂಗಳೂರು( ಜು.5): ರಾಜ್ಯದಲ್ಲಿ ಇಂದು 1843 ಪ್ರಖರಣಗಳು ದಾಖಲಾಗಿದ್ದು, ರಾಜ್ಯದ ಜನರನ್ನು ಕಂಗಾಲು ಮಾಡಿದೆ. ಇದರೊಂದಿಗೆ ರಾಜ್ಯದಲ್ಲಿ 25,317 ಜನರಿಗೆ ಇಲ್ಲಿಯವರೆಗೆ ಸೋಂಕು ತಗುಲಿದಂತಾಗಿದೆ. ಇದರೊಂದಿಗೆ ಕೊರೊನಾ 30 ಜನರನ್ನು ಬಲಿ ತೆಗೆದುಕೊಂಡಿದೆ.

ರಾಜ್ಯದಲ್ಲಿ ಸೋಂಕಿನಿಂದ ಗುಣಮುಖರಾದವರು ಎಷ್ಟು ?

ರಾಜ್ಯದಲ್ಲಿ ಇಂದು ಒಟ್ಟು 680 ಜನರು ಕೊರೊನಾ ಸೋಂಕಿನಿಂದ ಗುಣಮುಖರಾಗಿದ್ದಾರೆ. ಇದರೊಂದಿಗೆ ಇಲ್ಲಿಯವರೆಗೆ 10,527 ಜನರು ಸೋಂಕಿನಿಂದ ಪಾರಾಗಿ ಮನೆ ಸೇರಿದ್ದಾರೆ. ಇನ್ನು ಈ ಸೋಂಕಿಗೆ ಒಳಗಾಗಿ ಆಸ್ಪತ್ರೆಯಲ್ಲಿ 14,385 ಜನರು ಚಿಕಿತ್ಸೆಯನ್ನು ಪಡೆದುಕೊಳ್ಳುತ್ತಿದ್ದಾರೆ.

ಬೆಂಗಳೂರಿನ ಕರೋನಾ ಸ್ಥಿತಿ ಹೇಗಿದೆ ?

ಇಂದು ಒಂದೇ ದಿನದಲ್ಲಿ ರಾಜ್ಯದ ರಾಜಧಾನಿಯಲ್ಲಿ 981 ಜನರಲ್ಲಿ ಸೋಂಕು ಪತ್ತೆಯಾಗಿದೆ. ಇಂದು 278 ಜನರು ಕೊರೊನಾ ಮುಕ್ತರಾಗಿದ್ದು, ಮನೆಗಳಿಗೆ ತೆರಳಿರುತ್ತಾರೆ. ಇದರೊಂದಿಗೆ ಇಲ್ಲಿಯವರೆಗೆ 1,545 ಜನರು ಗುಣಮುಖರಾಗಿದ್ದಾರೆ. ಇನ್ನೂ 8,860 ಜನರು ಸೋಂಕಿಗೆ ತುತ್ತಾಗಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ. ಇದರೊಂದಿಗೆ 155 ಜನರು ಕೋವಿಡ್-19 ರ ಸೋಂಕಿನಿಂದ ಇಲ್ಲಿಯವರೆಗೆ ಬೆಂಗಳೂರಿನಲ್ಲಿ ಸಾವನ್ನಪ್ಪಿದ್ದಾರೆ.

ಯಾವ ಜಿಲ್ಲೆಯಲ್ಲಿ ಎಷ್ಟು ಸೋಂಕು ?

ಇಂದು ದಾಖಲಾದ ಕೊರೊನಾ ಪ್ರಕರಣಗಳನ್ನು ಜಿಲ್ಲಾವಾರು ನೋಡುತ್ತ ಹೋದರೆ, ಬೆಂಗಳೂರುನಗರ 981, ಬಳ್ಳಾರಿ 99, ಉತ್ತರಕನ್ನಡ 81, ಬೆಂಗಳೂರು ಗ್ರಾಮಾಂತರ 68,  ಧಾರವಾಡ 56, ಕಲಬುರಗಿ 53, ಹಾಸನ 49, ಮೈಸೂರು 45, ಬೀದರ್ 44, ಉಡುಪಿ 40, ಮಂಡ್ಯ 39, ವಿಜಯಪುರ 36, ಯಾದಗಿರಿ 35, ದಕ್ಷಿಣಕನ್ನಡ 34, ಬಾಗಲಕೋಟೆ 33, ತುಮಕೂರು 31, ಶಿವಮೊಗ್ಗ 24, ಗದಗ 18, ಚಾಮರಾಜನಗರ 12, ರಾಮನಗರ 11, ಕೋಲಾರ 10, ಹಾವೇರಿ 9, ಕೊಪ್ಪಳ 9, ಚಿಕ್ಕಬಳ್ಳಾಪುರ 07, ರಾಯಚೂರು 06, ಚಿತ್ರದುರ್ಗ 6, ದಾವಣಗೆರೆ 3, ಚಿಕ್ಕಮಗಳೂರು 2, ಕೊಡಗು 2 ಸೋಂಕಿನ ಪ್ರಖರಣಗಳು ಪತ್ತೆಯಾಗಿವೆ.

ರಾಜ್ಯದಲ್ಲಿ ಸಾವಿನ ಸಂಖ್ಯೆಯೆಷ್ಟು ಗೊತ್ತೇ ?

ರಾಜ್ಯದಲ್ಲಿ ಇಂದು ಒಂದೇ ದಿನದಲ್ಲಿ 30 ಕೊರೊನಾ ಸೋಂಕಿನಿಂದ ಸಾವಾಗಿದೆ. ಯಾವ ಯಾವ ಜಿಲ್ಲೆಯಲ್ಲಿ ಎಷ್ಟು ಎಂದು ನೋಡುವುದಾದರೆ ಬೆಂಗಳೂರು ನಗರ 10, ಬೀದರ್ 8, ಮೈಸೂರು 3, ದಕ್ಷಿಣ ಕನ್ನಡ 2, ದಾವಣಗೆರೆ 1, ಬಳ್ಳಾರಿ 1,  ತುಮಕೂರು 1, ಚಿಕ್ಕಬಳ್ಳಾಪುರ 1, ಬಾಗಲಕೋಟೆ 1, ಹಾಸನ 1, ಕೊಡಗು 1 ಸಾವಾಗಿದೆ ಎಂದು ಆರೋಗ್ಯ ಇಲಾಖ್ಯೆಯ ಬುಲೆಟಿನ್ ತಿಳಿಸಿದೆ.

ಜಿಲ್ಲಾವಾರು ಐಸಿಯುನಲ್ಲಿ ಇರುವವರೆಷ್ಟು ?

ಕೊರೊನಾ ಸೋಂಕಿಗೆ ಒಳಗಾಗಿ ತೀವ್ರ ಅನಾರೋಗ್ಯದಲ್ಲಿ ಇರುವವರನ್ನು ಐಸಿಯು ಘಟಕಕ್ಕೆ ಸ್ಥಲಾಂತರಿಸಲಾಗುತ್ತದೆ. ಹೀಗೆ ಸ್ಥಳಾಂತರಗೊಂಡ ಜನರ ಜಿಲ್ಲಾವಾರು ಮಾಹಿತಿ ಇಲ್ಲಿದೆ. ಬೆಂಗಳೂರು 166, ಧಾರವಾಡ 13, ಕಲಬುರಗಿ 13, ರಾಯಚೂರು 11, ಬಳ್ಳಾರಿ 10, ಹಾಸನ 9, ಶಿವಮೊಗ್ಗ 8, ಮೈಸೂರು 7, ಬೀದರ್ 6, ದಕ್ಷಿಣ ಕನ್ನಡ 5, ಗದಗ 5, ಕೋಲಾರ 4, ತುಮಕೂರು 4, ದಾವಾಣಗೆರೆ 3,  ಬಾಗಲಕೋಟೆ 3, ಮಂಡ್ಯ 3, ಕೊಡಗು 2, ಬೆಳಗಾವಿ 2, ಚಾಮರಾಜನಗರ 2, ಉಡುಪಿ 2, ಕೊಪ್ಪಳ 1 ಪ್ರಖರಣಗಳು ಚಿಕಿತ್ಸೆಗೆ ಒಳಗಾಗಿವೆ.

ತಾಜಾ ಸುದ್ದಿಗಳಿಗಾಗಿ ನಮ್ಮನ್ನು ಸಾಮಾಜಿಕ ತಾಣಗಳಲ್ಲಿ ಫಾಲೋ ಮಾಡಿ
ವಾಟ್ಸಪ್ಟೆಲಿಗ್ರಾಮ್ಕೂ ಆಫ್ಫೇಸ್ ಬುಕ್ ಫೇಜ್

ಪ್ರತಿಷ್ಠಿತ ನ್ಯೂಸ್ ಆಫ್ ಗಳಲ್ಲಿ ನಮ್ಮನ್ನು ಫಾಲೋ ಮಾಡಿ
ಡೈಲಿಹಂಟ್ಗೂಗಲ್ ನ್ಯೂಸ್ 

LEAVE A REPLY

Please enter your comment!
Please enter your name here