ಬೆಂಗಳೂರು (ಜು.4) : ರಾಜ್ಯದಲ್ಲಿ ಕೊರೊನಾ ಸೋಂಕಿಗೆ ಒಳಗಾಗುವವರ ಸಂಖ್ಯೆಯು ದಿನ ದಿಂದ ದಿನಕ್ಕೆ ಹೆಚ್ಚುತ್ತಲೇ ಸಾಗಿದೆ. ಇಂದು ಒಂದೇ ದಿನಕ್ಕೆ 1839 ಜನರಲ್ಲಿ ಸೋಂಕು ದೃಡಪಟ್ಟಿದೆ. ಇದರೊಂದಿಗೆ ರಾಜ್ಯದಲ್ಲಿ 21,549 ಜನರಿಗೆ ಇಲ್ಲಿಯವರೆಗೆ ಸೋಂಕು ತಗುಲಿದಂತಾಗಿದೆ. ಇಂದು ಆಘಾತ ಉಂಟುಮಾಡುವಂತೆ ಕೋವಿಡ್-19 ರ ಸೋಂಕಿನಿಂದ 42 ಜನರು ಸಾವನ್ನಪ್ಪಿದ್ದಾರೆ.

ಬೆಂಗಳೂರಿನ ಕರೋನಾ ಸ್ಥಿತಿ

ಇಂದು ಒಂದೇ ದಿನದಲ್ಲಿ ರಾಜ್ಯದ ರಾಜಧಾನಿಯಲ್ಲಿ 1172 ಜನರಲ್ಲಿ ಸೋಂಕು ಪತ್ತೆಯಾಗಿದೆ. ಇದರೊಂದಿಗೆ ಬೆಂಗಳೂರು ಒಂದರಲ್ಲೇ ಇಲ್ಲಿಯವರೆಗೆ 8345 ಜನರಿಗೆ ಸೋಂಕು ತಗುಲಿದಂತಾಗಿದೆ. ಇದರಲ್ಲಿ ಇಲ್ಲಿಯವರೆಗೆ 965 ಜನರು ಗುಣಮುಖರಾಗಿದ್ದಾರೆ. ಇನ್ನೂ 7250 ಜನರು ಸೋಂಕಿಗೆ ಒಳಗಾಗಿ ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ. ನಗರವೊಂದರಲ್ಲೇ ಇಂದು 24 ಜನರು ಸಾವನ್ನಪ್ಪಿದ್ದು, ಇಲ್ಲಿಯವರೆಗೆ 129 ಜನರು ಸಾವಿಗೀಡಾದಂತೆ ಆಗಿದೆ.

ಇದನ್ನೂ ಓದಿರಿ:ಇವತ್ತು ರಾತ್ರಿಯಿಂದಲೇ ಕರ್ನಾಟಕ ಕಂಪ್ಲೀಟ್ ಲಾಕ್ ಡೌನ್..! ಏನಿರುತ್ತೆ ? ಎನಿರಲ್ಲ ?

ಯಾವ ಜಿಲ್ಲೆಯಲ್ಲಿ ಎಷ್ಟು ಸೋಂಕು ?

ಇಂದು ದಾಖಲಾದ ಕೊರೊನಾ ಪ್ರಕರಣಗಳನ್ನು ಜಿಲ್ಲಾವಾರು ನೋಡುತ್ತ ಹೋದರೆ ಬೆಂಗಳೂರು ನಗರ 1172, ದಕ್ಷಿಣ ಕನ್ನಡ 75, ಬಳ್ಳಾರಿ 73, ಬೀದರ್ 51, ಧಾರವಾಡ 45, ರಾಯಚೂರು 41, ಮೈಸೂರು 38, ಕಲಬುರಗಿ 37, ವಿಜಯಪುರ 37, ಮಂಡ್ಯ 35, ಉತ್ತರ ಕನ್ನಡ 35, ಶಿವಮೊಗ್ಗ 31, ಹಾವೇರಿ 28, ಬೆಳಗಾವಿ 27, ಹಾಸನ 25, ಉಡುಪಿ 18, ಚಿಕ್ಕಬಳ್ಳಾಪುರ 12, ತುಮಕೂರು 12, ಬೆಂಗಳೂರು ಗ್ರಾಮಾಂತರ 11, ಕೋಲಾರ 11, ದಾವಣಗೆರೆ 7, ಚಾಮರಾಜನಗರ 5, ಗದಗ 4, ಕೊಪ್ಪಳ 3,  ಚಿಕ್ಕಮಂಗಳೂರು 3, ರಾಮನಗರ 2, ಯಾದಗಿರಿ 1 ಸೋಂಕಿತರು ದಾಖಲಾಗಿದ್ದಾರೆ.

ಸೋಂಕಿನಿಂದ ಗುಣಮುಖರಾದವರು ಎಷ್ಟು ?

ರಾಜ್ಯದಲ್ಲಿ ಇಂದು ಒಟ್ಟು 439 ಜನರು ಕೊರೊನಾ ಸೋಂಕಿನಿಂದ ಗುಣಮುಖರಾಗಿದ್ದಾರೆ. ಇದರೊಂದಿಗೆ ಇಲ್ಲಿಯವರೆಗೆ 9244 ಜನರು ಸೋಂಕಿನಿಂದ ಪಾರಾಗಿ ಮನೆ ಸೇರಿದ್ದಾರೆ.  ಇನ್ನು ಈ ಸೋಂಕಿಗೆ ಒಳಗಾಗಿ ಆಸ್ಪತ್ರೆಯಲ್ಲಿ 11966 ಜನರು ಚಿಕಿತ್ಸೆಯನ್ನು ಪಡೆದುಕೊಳ್ಳುತ್ತಿದ್ದಾರೆ.

ಯಾವ ಜಿಲ್ಲೆಯಲ್ಲಿ ಎಷ್ಟು ಸಾವು ?

ಇಂದು ಒಂದೇ ದಿನ 42 ಜನರು ಸಾವನ್ನಪ್ಪಿದ್ದು, ಇಲ್ಲಿಯವರೆಗೆ 335 ಜನರು ಕೋವಿಡ್-19 ಕ್ಕೆ ಬಲಿಯಾದಂತಾಗಿದೆ. ಜಿಲ್ಲಾವಾರು ಸಾವಿನ ಸಂಖ್ಯೆಯನ್ನು ನೋಡುವುದಾದರೆ ಬೆಂಗಳೂರು ನಗರ 24, ಬೀದರ್ 6, ಕಲಬುರಗಿ 3,  ಧಾರವಾಡ 3, ದಕ್ಷಿಣ ಕನ್ನಡ 4, ಹಾಸನ 1, ಬೆಂಗಳೂರು ಗ್ರಾಮಾಂತರ 1 ಸಾವಾಗಿದೆ.

LEAVE A REPLY

Please enter your comment!
Please enter your name here