new-corona-cases-found-in-karnataka

ಬೆಂಗಳೂರು (ಜೂನ್ 14): ರಾಜ್ಯದಲ್ಲಿಂದು ಕೊರೊನಾ ತನ್ನ ರೌದ್ರ ನರ್ತನ ಮುಂದುವರೆಸಿದ್ದು, ಹೊಸದಾಗಿ 176 ಕೋವಿಡ್-19 ಪಾಸಿಟಿವ್ ಪ್ರಖರಣಗಳು ಬೆಳಕಿಗೆ ಬಂದಿವೆ. ಇದರೊಂದಿಗೆ ರಾಜ್ಯದಲ್ಲಿ ಕೊರೊನಾಗೆ ಬಲಿಯಾಗುವವರ ಸಂಖ್ಯೆ 7000 ಕ್ಕೆ ಏರಿಕೆಯಾದಂತಾಗಿದೆ.

ಇಂದು ಸೋಂಕಿಗೆ ಒಳಗಾದವರ ಜಿಲ್ಲಾವಾರು ಸಂಖ್ಯೆಯನ್ನು ನೋಡುವುದಾದರೆ ಬೆಂಗಳೂರು ನಗರ 42, ಯಾದಗಿರಿ 22, ಬೀದರ್ 20, ಉಡುಪಿ 21, ಕಲಬುರಗಿ 13, ಧಾರವಾಡ 10, ಬಳ್ಳಾರಿ 8, ಕೋಲಾರ 7, ಉತ್ತರ ಕನ್ನಡ 6, ಮಂಡ್ಯ 5, ದಕ್ಷಿಣ ಕನ್ನಡ 5, ಬಾಗಲಕೋಟೆ 4, ರಾಮನಗರ 3, ರಾಯಚೂರು 2, ಶಿವಮೊಗ್ಗ 2, ಹಾಸನ 1, ವಿಜಯಪುರ 1, ಹಾವೇರಿ 1, ಬೆಳಗಾವಿ 1, ಬೆಂಗಳೂರು ಗ್ರಾಮೀಣ 1, ಇತರೆ 1 ಪ್ರಕರಣಗಳು ದಾಖಲಾಗಿವೆ.

ಇಡೀ ದೇಶದಲ್ಲಿಯೂ ಕೊರೊನಾ ತಾಂಡವವಾಡುತ್ತಿದ್ದು, ಒಂದೇ ದಿನ ಬರೋಬ್ಬರಿ 11,929 ಕ್ಕೂ ಹೆಚ್ಚು ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ. ಇದರೊಂದಿಗೆ ದೇಶದ ಒಟ್ಟು ಸೋಂಕಿತರ ಸಂಖ್ಯೆ 3.20 ಲಕ್ಷಕ್ಕೆ ಏರಿಕೆಯಾಗಿದೆ. ಇದರೊಂದಿಗೆ ವಿವಿಧ ರಾಜ್ಯಗಳಲ್ಲಿ ಒಂದೇ ದಿನ 311 ಮಂದಿ ಸಾವನ್ನಪ್ಪಿದ್ದು, ಒಟ್ಟು ಇಲ್ಲಿಯವರೆಗೆ ಸಾವನ್ನಪ್ಪಿದವರ ಸಂಖ್ಯೆ 9,195 ಕ್ಕೆ ಏರಿಕೆಯಾಗಿದೆ.

LEAVE A REPLY

Please enter your comment!
Please enter your name here