17-mps-found-positive-for-coronavirus

ನವದೆಹಲಿ: ಸಂಸತ್ ಅಧಿವೇಶನ ಆರಂಭಕ್ಕೂ ಮುನ್ನ ಸಂಸದರಿಗೆ ಕೊರೊನಾ ಪರೀಕ್ಷೆ ನಡೆಸಿದ್ದು, ಇದರಲ್ಲಿ 17 ಸಂಸದರಿಗೆ ಕೊರೊನಾ ಇರುವುದು ದೃಡಪಟ್ಟಿದೆ.

ಸೆಪ್ಟೆಂಬರ್ 13 ರಂದು ಎಲ್ಲ ಸಂಸದರಿಗೆ ಕೊರೊನಾ ಪರೀಕ್ಷೆಯನ್ನು ನಡೆಸಲಾಗಿತ್ತು, ಇವರಲ್ಲಿ ಅನಂತ್ ಕುಮಾರ್ ಹೆಗ್ಡೆ ಸೇರಿದಂತೆ 17 ಸಂಸದರಿಗೆ ಕೊರೋನಾ ಇರುವುದು ದೃಡವಾಗಿದೆ. ಇದರೊಂದಿಗೆ ಏಳು ಕೇಂದ್ರ ಸಚಿವರು ಮತ್ತು 25 ಸಂಸದರಿಗೆ ಕೊರೊನಾ ಸೋಂಕು ತಗುಲಿದಂತಾಗಿದೆ.

ಇನ್ನು 17 ಸಂಸದರ ಪೈಕಿ ಬಿಜೆಪಿಯ 12, ವೈ ಎಸ್ ಆರ್ ಕಾಂಗ್ರೆಸ್ ನ 2, ಡಿಎಂಕೆ ಶಿವಸೇನೆ ಮತ್ತು ಆರ್ ಎಲ್ ಪಿ ಯ ತಲಾ 1 ಸಂಸದರು ಸೇರಿದ್ದಾರೆ.

LEAVE A REPLY

Please enter your comment!
Please enter your name here