9366-new-covid-19-cases-found-in-karnataka

ಬೆಂಗಳೂರು (ಜು.03): ರಾಜ್ಯದಲ್ಲಿ ಇಂದು ಒಂದೇ ದಿನದಲ್ಲಿ ಕೊರೋನಾಗೆ 21 ಜನರು ಬಲಿಯಾಗಿದ್ದರೆ, 1,692 ಜನರಿಗೆ ಸೋಂಕು  ದೃಡಪಟ್ಟಿದೆ ಎಂದು ಆರೋಗ್ಯ ಇಲಾಖೆಯು ತಿಳಿಸಿದೆ. ಮೊದಲಿಗೆ ಕರ್ನಾಟಕದಲ್ಲಿ ಸೋಂಕಿಗೆ ಒಳಗಾಗುವವರ ಸಂಖ್ಯೆ ಕಡಿಮೆಯಿತ್ತು, ಆದರೆ ಈಗ ದಿನದಿಂದ ದಿನಕ್ಕೆ ಏರಿಕೆಯನ್ನು ಕಾಣುತ್ತಿದೆ. ಇಲ್ಲಿಯವರೆಗಿನ ರಾಜ್ಯದ ಸೋಂಕಿತರ ಸಂಖ್ಯೆಯು 19,710 ಕ್ಕೆ ಬಂದು ನಿಂತಿದೆ.

ಇಂದು ದಾಖಲಾದ ಕೊರೊನಾ ಪ್ರಕರಣಗಳನ್ನು ಜಿಲ್ಲಾವಾರು ನೋಡುತ್ತ ಹೋದರೆ ಬೆಂಗಳೂರು ನಗರ 994, ಬಳ್ಳಾರಿ 97, ದಕ್ಷಿಣ ಕನ್ನಡ 97, ಕಲಬುರಗಿ 72, ತುಮಕೂರು 57, ಬೆಂಗಳೂರು ಗ್ರಾಮಾಂತರ 44, ಧಾರವಾಡ 38, ಮೈಸೂರು 35, ಮಂಡ್ಯ 33, ಬೀದರ್ 28, ಚಾಮರಾಜನಗರ 24,ಶಿವಮೊಗ್ಗ 23, ಗದಗ 19, ಉಡುಪಿ 16, ಕೊಡಗು 16, ಯಾದಗಿರಿ 14, ಹಾಸನ 13, ಬೆಳಗಾವಿ 13, ಕೋಲಾರ 11, ರಾಮನಗರ 10, ಬಾಗಲಕೋಟೆ 8, ರಾಯಚೂರು 7, ದಾವಣಗೆರೆ 5, ಉತ್ತರ ಕನ್ನಡ 5, ವಿಜಯಪುರ 4, ಕೊಪ್ಪಳ 4, ಚಿಕ್ಕಬಳ್ಳಾಪುರ 3, ಚಿತ್ರದುರ್ಗ 3, ಹಾವೇರಿ 1 ಸೋಂಕಿತರು ದಾಖಲಾಗಿದ್ದಾರೆ.

ಬೆಂಗಳೂರು ನಗರದಲ್ಲಿ ಕೊರೊನಾ ಸೋಂಕು ಮೂಲೆ ಮೂಲೆಗೂ ಹರಡುತ್ತಿದ್ದು, ದಿನದಿಂದ ಸೋಂಕಿತರ ಪ್ರಮಾಣದಲ್ಲಿ ಏರಿಕೆ ಕಾಣುತ್ತಲೇ ಇದೆ. ಇಂದು ಒಂದೇ ದಿನದಲ್ಲಿ ಬೆಂಗಳೂರು ನಗರ ಒಂದರಲ್ಲೇ ಸಾವಿರದ ಹತ್ತಿರಕ್ಕೆ ಬಂದು ನಿಂತಿದೆ. ಇಂದು ಬೆಂಗಳೂರಿನಲ್ಲಿ 994 ಪ್ರಕರಣಗಳು ಬೆಳಕಿಗೆ ಬಂದಿವೆ. ಇನ್ನು ನಗರದಲ್ಲಿ 121 ರೋಗಿಗಳು ತೀವ್ರ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದು, ಐಸಿಯು ಚಿಕಿತ್ಸೆಯನ್ನು ಬಳಸಿಕೊಳ್ಳಲಾಗಿದೆ. ಕೇವಲ ಸೋಂಕು ಮಾತ್ರವಲ್ಲ ರಾಜಧಾನಿಯಲ್ಲಿ ಸಾವಿನ ಸಂಖ್ಯೆಯು ದಾಖಲಾಗುತ್ತಿರುವುದು ಭಯವನ್ನು ಹುಟ್ಟಿಸುವಂತಿದೆ. ಬೆಂಗಳೂರು ನಗರವೊಂದರಲ್ಲೇ 6 ಸಾವುಗಳು ಸಂಭವಿಸಿದೆ.

ರಾಜ್ಯದಲ್ಲಿ ಶುಕ್ರವಾರ ಸೋಂಕಿನಿಂದ ಗುಣಮುಖರಾಗಿ 471 ಜನರು ಮನೆಗೆ ತೆರಳಿದ್ದಾರೆ. ಇದರೊಂದಿಗೆ ಇಲ್ಲಿಯವರೆಗೆ 8,805 ಜನರು ಸೋಂಕಿನಿಂದ ಗುಣಮುಖರಾದಂತೆ ಆಗಿದೆ. ಇದರೊಂದಿಗೆ ಸಕ್ರೀಯ ಸೋಂಕಿತರ ಸಂಖ್ಯೆಯು ಹೆಚ್ಚಾಗಿಯೇ ಇದ್ದು, 10,608 ಜನರು ರಾಜ್ಯದ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆಯನ್ನು ಪಡೆದುಕೊಳ್ಳುತ್ತಿದ್ದಾರೆ.

ಇನ್ನು ಇಂದಿನ ಮರಣದ ಸಂಖ್ಯೆಯನ್ನು ನೋಡುತ್ತಾ ಹೋದರೆ, ಬೆಂಗಳೂರು ನಗರದಲ್ಲಿ 6, ಕಲಬುರಗಿ 3, ಚಿಕ್ಕಬಳ್ಳಾಪುರ 3, ವಿಜಯಪುರ 2, ಶಿವಮೊಗ್ಗ 2, ಹಾಸನ 1, ದಾವಣಗೆರೆ 1, ಬೀದರ್ 1, ರಾಯಚೂರು 1, ಬಳ್ಳಾರಿ 1 ಸಾವುಗಳು ಸಂಬವಿಸಿವೆ. ಇದರೊಂದಿಗೆ ರಾಜ್ಯದಲ್ಲಿ ಮೃತರ ಸಂಖ್ಯೆ 293 ಕ್ಕೆ ಏರಿಕೆಯನ್ನು ಕಂಡಿದೆ.

LEAVE A REPLY

Please enter your comment!
Please enter your name here