ಬೆಂಗಳೂರು (ಜೂನ್ 09): ರಾಜ್ಯದಲ್ಲಿಂದು ಹೊಸದಾಗಿ 161 ಕೋವಿಡ್-19 ಪಾಸಿಟಿವ್ ಪ್ರಖರಣಗಳು ಬೆಳಕಿಗೆ ಬಂದಿವೆ. ಇದರೊಂದಿಗೆ ರಾಜ್ಯದ ಒಟ್ಟು ಸೋಂಕಿತರ ಸಂಖ್ಯೆ 5921 ಕ್ಕೆ ತಲುಪಿದೆ.
ಇಂದು ಪತ್ತೆಯಾದ ಸೋಂಕಿತರಲ್ಲಿ 91 ಜನರು ಅಂತರಾಜ್ಯ ಪ್ರಯಾಣದ ಹಿನ್ನೆಲೆಯನ್ನು ಹೊಂದಿದ್ದರೆ, ಇನ್ನು 24 ಜನರು ಅಂತರಾಷ್ಟ್ರೀಯ ಪ್ರಯಾಣದ ಹಿನ್ನೆಲೆಯವರಾಗಿದ್ದಾರೆ. ಈ ಸಂಖ್ಯೆಯನ್ನು ಗಮನಿಸಿದಾಗ ಹೊರರಾಜ್ಯ ಮತ್ತು ಹೊರದೇಶದಲ್ಲಿರುವ ನಮ್ಮವರನ್ನು ಕರೆತಂದಿರುವುದೇ ಈ ಪ್ರಮಾಣದಲ್ಲಿ ಸೋಂಕಿತರ ಸಂಖ್ಯೆ ಏರಿಕೆಗೆ ಕಾರಣ.
ಇಂದು ಸೋಂಕಿಗೆ ಒಳಗಾದವರ ಜಿಲ್ಲಾವಾರು ಸಂಖ್ಯೆಯನ್ನು ನೋಡುವುದಾದರೆ ಯಾದಗಿರಿ 61, ಬೆಂಗಳೂರು ನಗರ 29, ದಕ್ಷಿಣ ಕನ್ನಡ 23, ಕಲಬುರಗಿ 10, ಬೀದರ್ 9, ದಾವಣಗೆರೆ 8, ಕೊಪ್ಪಳ 6, ಶಿವಮೊಗ್ಗ 4, ಧಾರವಾಡ 2, ವಿಜಯಪುರ 2, ಚಿಕ್ಕಬಳ್ಳಾಪುರ 2, ಮೈಸೂರು 2, ಬಾಗಲಕೋಟೆ 1, ತುಮಕೂರು 1, ಚಾಮರಾಜನಗರ 1 ಪ್ರಕರಣಗಳು ದಾಖಲಾಗಿವೆ.
ಕೋವಿಡ್19 ಮಾಹಿತಿ: 9ನೇ ಜೂನ್ 2020
ಒಟ್ಟು ಪ್ರಕರಣಗಳು: 5921
ಮೃತಪಟ್ಟವರು: 66
ಗುಣಮುಖರಾದವರು: 2605
ಹೊಸ ಪ್ರಕರಣಗಳು: 161ಇತರೆ ಮಾಹಿತಿ: ಜಿಲ್ಲಾವಾರು ಸೋಂಕಿತರು, ಟೆಲಿಮೆಡಿಸಿನ್ ಸೌಲಭ್ಯದ ಮಾಹಿತಿ, 1/2 pic.twitter.com/Bl1XBUoEGS
— CM of Karnataka (@CMofKarnataka) June 9, 2020
ಕೊರೊನಾ ಸೋಂಕು ಹೆಚ್ಚುತ್ತಿರುವಂತೆಯೇ ಗುಣಮುಖರಾಗುತ್ತಿರುವವರ ಸಂಖ್ಯೆಯೂ ಹೆಚ್ಚಿದೆ. ಇಂದು ಆಸ್ಪತ್ರೆಯಿಂದ 164 ಜನರು ಗುಣಮುಖರಾಗಿ ಮನೆಗೆ ತೆರಳಿದ್ದಾರೆ. ಇದರೊಂದಿಗೆ ಇಲ್ಲಿಯವರೆಗೆ 2605 ಜನರು ಗುಣಮುಖರಾದಂತಾಯಿತು.
ಇಂದು ಇಬ್ಬರು ಕೊರೊನಾ ಸೋಂಕಿಗೆ ಬಲಿಯಾಗಿದ್ದು, ಒಬ್ಬರು ಬೆಂಗಳೂರು ನಗರದ 65 ವರ್ಷದ ವ್ಯಕ್ತಿಯಾಗಿದ್ದಾರೆ. ಇವರು ರಕ್ತದೊತ್ತಡ, ಮಧುಮೇಹ, ಕಿಡ್ನಿ ತೊಂದರೆಗಳಿಂದ ಬಳಲುತ್ತಿದ್ದರು. ಇನ್ನು ಎರಡನೆಯವರು, ಕಲಬುರಗಿಯ 17 ವರ್ಷದ ಯುವತಿಯಾಗಿದ್ದಾರೆ. ಇವರು ಜೂ.4 ರಂದು ಆಸ್ಪತ್ರಗೆ ದಾಖಲಾಗಿದ್ದರು ಆದರೆ ಅದೇ ದಿನ ಮೃತಪಟ್ಟಿದ್ದಾರೆ. ಇವರ ತಪಾಸಣೆಯ ವರದಿ ಇಂದು ಬಂದಿದೆ. ಅಲ್ಲದೇ ಇವರು ಜ್ವರ, ತಲೆನೋವು, ಉಸಿರಾಟದ ತೊಂದರೆ ಮತ್ತು ನರಸಂಬಂಧಿ ಸಮಸ್ಯೆಗಳಿಂದ ಬಳಲುತ್ತಿದ್ದರು ಎಂದು ತಿಳಿದುಬಂದಿದೆ.