ಬೆಂಗಳೂರು (ಜೂ.4): ರಾಜ್ಯದಲ್ಲಿ ಇಂದು ಕೊರೋನಾ ಪಾಸಿಟಿವ್ ಪ್ರಕರಣ ಕೊಂಚ ಏರಿಕೆಯನ್ನು ಕಂಡಿದೆ. ಕಳೆದ 24 ಗಂಟೆಗಳಲ್ಲಿ 16,068 ಪ್ರಕರಣಗಳು ವರದಿಯಾಗಿದ್ದು, ಇದರೊಂದಿಗೆ 364 ಜನರು ಸಾವನ್ನಪ್ಪಿದ್ದಾರೆ.
ಇಂದು ಒಂದೇ ದಿನದಲ್ಲಿ 16,068 ಕೊರೋನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿದ್ದು, ಇದರೊಂದಿಗೆ ರಾಜ್ಯದಲ್ಲಿ ಇಲ್ಲಿಯವರೆಗೆ ದಾಖಲಾದ ಒಟ್ಟಾರೆ ಸೋಂಕಿತರ ಸಂಖ್ಯೆ 26,69,514 ಕ್ಕೆ ಏರಿಕೆಯಾಗಿದೆ. ಇನ್ನು ಕಳೆದ 24 ಗಂಟೆಗಳಲ್ಲಿ 364 ಜನರು ಸೋಂಕಿನಿಂದ ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.
ರಾಜ್ಯದಲ್ಲಿ ಇಂದು ಸೋಂಕಿತರ ಪ್ರಮಾಣಕ್ಕಿಂತ ಚೇತರಿಕೆಯ ಪ್ರಮಾಣ ಹೆಚ್ಚಿದೆ. ಇಂದು 22,316 ಜನರು ಕೋವಿಡ್ ಸೋಂಕಿನಿಂದ ಗುಣಮುಖರಾಗಿದ್ದಾರೆ. ಆ ಮೂಲಕ ರಾಜ್ಯದಲ್ಲಿ ಇನ್ನೂ 2,80,186 ಸಕ್ರಿಯ ಸೋಂಕಿತರು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.
ಇದನ್ನೂ ಓದಿರಿ:: ದ್ವಿತೀಯ PUC ಪರೀಕ್ಷೆ ರದ್ದು, ಜುಲೈ ಅಥವಾ ಆಗಸ್ಟ್ ನಲ್ಲಿ SSLC ಪರೀಕ್ಷೆ – ಇಲ್ಲಿದೆ ಸಂಪೂರ್ಣ ಮಾಹಿತಿ
ಸೋಂಕಿತರ ಜಿಲ್ಲಾವಾರು ಮಾಹಿತಿ:
ಜಿಲ್ಲೆಗಳಲ್ಲಿ ದಾಖಲಾದ ಕೊರೋನಾ ಪ್ರಕರಣಗಳ ಸಂಖ್ಯೆಯನ್ನು ನೋಡುತ್ತಾ ಹೋಗುವುದಾದರೆ, ಬಾಗಲಕೋಟೆ 208, ಬಳ್ಳಾರಿ 423, ಬೆಳಗಾವಿ 792, ಬೆಂಗಳೂರು ಗ್ರಾಮಾಂತರ 429, ಬೆಂಗಳೂರು ನಗರ 3221, ಬೀದರ್ 19, ಚಾಮರಾಜನಗರ 296, ಚಿಕ್ಕಬಳ್ಳಾಪುರ 400, ಚಿಕ್ಕಮಗಳೂರು 595, ಚಿತ್ರದುರ್ಗ 702, ದಕ್ಷಿಣ ಕನ್ನಡ 806, ದಾವಣಗೆರೆ 620, ಧಾರವಾಡ 235, ಗದಗ 194, ಹಾಸನ 974, ಹಾವೇರಿ 100, ಕಲಬುರಗಿ 46, ಕೊಡಗು 388, ಕೋಲಾರ 304, ಕೊಪ್ಪಳ 299, ಮಂಡ್ಯ 526, ಮೈಸೂರು 1265, ರಾಯಚೂರು 184, ರಾಮನಗರ 146, ಶಿವಮೊಗ್ಗ 636, ತುಮಕೂರು 857, ಉಡುಪಿ 561, ಉತ್ತರ ಕನ್ನಡ 559, ವಿಜಯಪುರ 190, ಯಾದಗಿರಿ 93 ಪ್ರಕರಣಗಳು ದಾಖಲಾಗಿವೆ.
ಇಂದಿನ 04/06/2021 ಸಂಪೂರ್ಣ ಪತ್ರಿಕಾ ಪ್ರಕಟಣೆಗಾಗಿ ಇಲ್ಲಿ ನೀಡಲಾಗಿರುವ ಲಿಂಕ್ ಅನ್ನು ಕ್ಲಿಕ್ ಮಾಡಿ.https://t.co/WY8H0ZNvar @CMofKarnataka @BSYBJP @mla_sudhakar @drashwathcn @RAshokaBJP @BSBommai @CPBlr @PIBBengaluru @KarnatakaVarthe @PIBBengaluru @BBMPCOMM @BlrCityPolice @blrcitytraffic pic.twitter.com/5jFZs53bIh
— K’taka Health Dept (@DHFWKA) June 4, 2021
ಇದನ್ನೂ ಓದಿರಿ:: ಕೇರಳಕ್ಕೆ ಎಂಟ್ರಿ ನೀಡಿದ ಮಾನ್ಸೂನ್ : ರಾಜ್ಯದಲ್ಲಿ ಮುಂಗಾರು ಮಳೆಯ ಆರ್ಭಟ ಶುರು.!