1502-new-corona-cases-found-in-karnataka

ಬೆಂಗಳೂರು (ಜು.2): ರಾಜ್ಯದಲ್ಲಿ ಇಂದು 1502 ಮಂದಿಗೆ ಸೋಂಕು ದೃಡವಾಗಿದ್ದು, ಈ ಮೂಲಕ ರಾಜ್ಯದಲ್ಲಿನ ಒಟ್ಟು ಸೋಂಕಿತರ ಸಂಖ್ಯೆ 18,016 ಕ್ಕೆ ಏರಿಕೆಯಾದಂತಾಗಿದೆ. ಇದರೊಂದಿಗೆ ಬರೋಬ್ಬರಿ 19 ಜನರು ಕೊರೊನಾ ಸೋಂಕಿಗೆ ಬಲಿಯಾಗಿದ್ದು, ಜನರಲ್ಲಿ  ಆತಂಕವನ್ನು ಹೆಚ್ಚಿಸಿದೆ.

ಬೆಂಗಳೂರಿನ ಪರಿಸ್ಥಿತಿಯು ದಿನದಿಂದ ದಿನಕ್ಕೆ ಹದಗೆಡುತ್ತಿದ್ದು, ಬೆಂಗಳೂರಿನಲ್ಲಿ ಇಂದು 889 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ಇದರೊಂದಿಗೆ ಬೆಂಗಳೂರು ನಗರದಲ್ಲಿ 3 ಸಾವಾಗಿದೆ.

ಇನ್ನು ಜಿಲ್ಲಾವಾರು ಸೋಂಕಿತರ ಸಂಖ್ಯೆಯನ್ನು ನೋಡುವುದಾದರೆ ಬೆಂಗಳೂರು ನಗರ 889, ದಕ್ಷಿಣ ಕನ್ನಡ -90, ಮೈಸೂರು -68,  ಬಳ್ಳಾರಿ-65, ಧಾರವಾಡ-47, ವಿಜಯಪುರ-39, ರಾಮನಗರ-39, ಕಲಬುರಗಿ-38, ಬೀದರ್ -32, ತುಮಕೂರು-26 , ಶಿವಮೊಗ್ಗ-23, ಮಂಡ್ಯ-19, ಉತ್ತರ ಕನ್ನಡ-17, ಹಾಸನ-15, ಉಡುಪಿ-14, ಕೋಲಾರ-12, ರಾಯಚೂರು-11, ಬಾಗಲಕೋಟೆ-10, ದಾವಣಗೆರೆ-08, ಯಾದಗಿರಿ-7,  ಬೆಳಗಾವಿ -7, ಕೊಡಗು-6,  ಬೆಂಗಳೂರು ಗ್ರಾಮಾಂತರ-05, ಹಾವೇರಿ-4, ಕೊಪ್ಪಳ-4, ಚಿತ್ರದುರ್ಗ-3, ಗದಗ-2,  ಚಿಕ್ಕಮಗಳೂರು-1, ಚಿಕ್ಕಬಳ್ಳಾಪುರ-1, ಸೋಂಕಿತರು ದಾಖಲಾಗಿದ್ದಾರೆ.

ರಾಜ್ಯದಲ್ಲಿ ಸಾವಿನ ಸಂಖ್ಯೆಯುಏರುತ್ತಿದ್ದು, ಇಂದು ಒಂದೇ ದಿನಕ್ಕೆ 19 ಕ್ಕೆ ಏರಿಕೆಯನ್ನು ಕಂಡಿದೆ. ಬಳ್ಳಾರಿ 4, ಬೆಂಗಳೂರು ನಗರದಲ್ಲಿ 3, ದಕ್ಷಿಣ ಕನ್ನಡ 3, ಕೊಪ್ಪಳ 1, ಮೈಸೂರು 1, ಹಾಸನ 1, ತುಮಕೂರು 1, ಕಲಬುರಗಿ 1, ಗದಗ 1, ಬೆಳಗಾವಿ 1, ಉಡುಪಿ 1, ಉತ್ತರ ಕನ್ನಡ 1 ಸಾವಾಗಿದೆ ಎಂದು ಆರೋಗ್ಯ ಇಲಾಖ್ಯೆಯ ಬುಲೆಟಿನ್ ತಿಳಿಸಿದೆ.

ಇದನ್ನೂ ಓದಿರಿ: ಸಿಹಿಸುದ್ದಿ: ಕೊರೊನಾ ಸೋಂಕಿಗೆ ಬಂತು ಆಯುರ್ವೇದ ಔಷಧಿ

ಇಂದು 271 ಜನರು ಗುಣಮುಖರಾಗಿ ಮನೆಗೆ ತೆರಳಿದ್ದು, ಇದರೊಂದಿಗೆ 8,334 ಜನರು ಗುಣಮುಖರಾದಂತಾಗಿದೆ. ರಾಜ್ಯದ ವಿವಿಧ ಆಸ್ಪತ್ರೆಗಳಲ್ಲಿ 9,406 ಜನರು ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ. ಇದರೊಂದಿಗೆ ತೀವ್ರ ನಿಗಾ ಘಟಕದಲ್ಲಿ 161 ಜನರನ್ನು ಇಟ್ಟು ಚಿಕಿತ್ಸೆಯನ್ನು ನೀಡಲಾಗುತ್ತಿದೆ.

ಸಂಜೆಯ ಪತ್ರಿಕಾ ಪ್ರಕಟಣೆ 02/07/2020.
ಸಂಪೂರ್ಣ ಪತ್ರಿಕಾ ಪ್ರಕಟಣೆಗಾಗಿ ಕೆಳಗೆ ಈ ಲಿಂಕನ್ನು ಕ್ಲಿಕ್ ಮಾಡಿ.

https://t.co/iv0vuPk3qV @BMTC_BENGALURU @NammaBESCOM @tv9kannada @publictvnews @suvarnanewstv @timesofindia @prajavani @udayavani_web @TV5kannada @Vijaykarnataka @VVani4U pic.twitter.com/tbli8b8O7z

— K’taka Health Dept (@DHFWKA) July 2, 2020

ತಾಜಾ ಸುದ್ದಿಗಳಿಗಾಗಿ ನಮ್ಮನ್ನು ಸಾಮಾಜಿಕ ತಾಣಗಳಲ್ಲಿ ಫಾಲೋ ಮಾಡಿ
ವಾಟ್ಸಪ್ಟೆಲಿಗ್ರಾಮ್ಕೂ ಆಫ್ಫೇಸ್ ಬುಕ್ ಫೇಜ್

ಪ್ರತಿಷ್ಠಿತ ನ್ಯೂಸ್ ಆಫ್ ಗಳಲ್ಲಿ ನಮ್ಮನ್ನು ಫಾಲೋ ಮಾಡಿ
ಡೈಲಿಹಂಟ್ಗೂಗಲ್ ನ್ಯೂಸ್ 

LEAVE A REPLY

Please enter your comment!
Please enter your name here