14304-new-corona-cases-found-in-karnataka

ಬೆಂಗಳೂರು: ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೊರೋನಾ ಹೊಸ ಪ್ರಕರಣಗಳ ಪತ್ತೆ ಸಂಖ್ಯೆ ಗಣನೀಯವಾಗಿ ಇಳಿಮುಖವಾಗುತ್ತಿದೆ. ಇಂದು ರಾಜ್ಯದಲ್ಲಿ 14,304 ಜನರಿಗೆ ಸೋಂಕು ಇರುವುದು ಪತ್ತೆಯಾಗಿದೆ.

ಕರ್ನಾಟಕದಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ 14,304 ಕೊರೋನಾ ಹೊಸ ಪ್ರಕರಣಗಳು ಪತ್ತೆಯಾಗಿದ್ದು,ಇದರೊಂದಿಗೆ ಇಲ್ಲಿಯವರೆಗೆ ರಾಜ್ಯದಲ್ಲಿ ದಾಖಲಾದ ಒಟ್ಟು ಸೋಂಕಿತರ ಸಂಖ್ಯೆ 26,18,735 ಕ್ಕೆ ಏರಿಕೆಯಾಗಿದೆ. ಇದರೊಂದಿಗೆ ರಾಜ್ಯದಲ್ಲಿ ಇಂದು 464 ಜನರು ಕೋವಿಡ್ ಸೋಂಕಿನಿಂದ ಸಾವನ್ನಪ್ಪಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.

ಇನ್ನು ಕಳೆದ 24 ಗಂಟೆಗಳ ಅವಧಿಯಲ್ಲಿ 29,271 ಜನರು ಕೋವಿಡ್ ಸೋಂಕಿನಿಂದ ಗುಣಮುಖರಾಗಿದ್ದಾರೆ. ಅಲ್ಲದೇ ರಾಜ್ಯದಲ್ಲಿ ಇನ್ನೂ ಸೋಂಕಿನಿಂದ ಪೀಡಿತರಾಗಿದ್ದು,ಅಗತ್ಯ ಚಿಕಿತ್ಸೆಯನ್ನು 2,98,299 (ಸಕ್ರೀಯ ಪ್ರಕರಣ) ಜನರು ತೆಗೆದುಕೊಳ್ಳುತ್ತಿದ್ದಾರೆ.

ಇದನ್ನು ಓದಿರಿ: ಲೈಂಗಿಕ ಜೀವನ ಹಾಳು ಮಾಡುತ್ತೆ ನಿಮ್ಮ ಈ ನಡವಳಿಕೆಗಳು !

ಜಿಲ್ಲಾವಾರು ಪ್ರಕರಣಗಳ ಸಂಖ್ಯೆ :

ಇನ್ನು ಜಿಲ್ಲೆಗಳಲ್ಲಿ ಪತ್ತೆಯಾದ ಸೋಂಕಿನ ವಿವರಗಳು ಈ ರೀತಿಯಾಗಿವೆ. ಬಾಗಲಕೋಟೆ 217, ಬಳ್ಳಾರಿ 399, ಬೆಳಗಾವಿ 891, ಬೆಂಗಳೂರು ಗ್ರಾಮಾಂತರ 202, ಬೆಂಗಳೂರು ನಗರ 3418, ಬೀದರ್ 22, ಚಾಮರಾಜನಗರ 80, ಚಿಕ್ಕಬಳ್ಳಾಪುರ 152, ಚಿಕ್ಕಮಗಳೂರು 504, ಚಿತ್ರದುರ್ಗ 637, ದಕ್ಷಿಣ ಕನ್ನಡ 536, ದಾವಣಗೆರೆ 178, ಧಾರವಾಡ 267, ಗದಗ 214, ಹಾಸನ 1127, ಹಾವೇರಿ 219, ಕಲಬುರಗಿ 82, ಕೊಡಗು 162, ಕೋಲಾರ 338, ಕೊಪ್ಪಳ 272, ಮಂಡ್ಯ 337, ಮೈಸೂರು 1153, ರಾಯಚೂರು 133, ರಾಮನಗರ 138, ಶಿವಮೊಗ್ಗ 520, ತುಮಕೂರು 769, ಉಡುಪಿ 735, ಉತ್ತರ ಕನ್ನಡ 332, ವಿಜಯಪುರ 163, ಯಾದಗಿರಿ 107 ಪ್ರಕರಣಗಳು ಪತ್ತೆಯಾಗಿವೆ.

LEAVE A REPLY

Please enter your comment!
Please enter your name here