ಬೆಂಗಳೂರು (ಜು.1): ರಾಜ್ಯದಲ್ಲಿ ಕೊರೊನಾ ಪ್ರಕರಣಗಳು ದಿನದಿಂದ ದಿನಕ್ಕೆ ಏರಿಕೆಯನ್ನು ಕಾಣುತ್ತಿವೆ. ಇಂದು 1,272 ಮಂದಿಗೆ ಸೋಂಕು ದೃಡವಾಗಿದ್ದು, ಈ ಮೂಲಕ ರಾಜ್ಯದಲ್ಲಿನ ಒಟ್ಟು ಸೋಂಕಿತರ ಸಂಖ್ಯೆ 16,514 ಕ್ಕೆ ಏರಿಕೆಯಾದಂತಾಗಿದೆ. ಇದರೊಂದಿಗೆ ಬರೋಬ್ಬರಿ 07 ಜನರು ಕೊರೊನಾ ಸೋಂಕಿಗೆ ಬಲಿಯಾಗಿದ್ದು, ಜನರಲ್ಲಿ ಆತಂಕವನ್ನು ಹೆಚ್ಚಿಸಿದೆ.
ರಾಜ್ಯದ ರಾಜಧಾನಿ ಕೊರೋನಾ ಹಾಟ್ ಸ್ಪಾಟ್ ಆಗಿ ಪರಿವರ್ತನೆಯಾಗುತ್ತಿದ್ದು, ಇಂದು ಒಂದೇ ದಿನದಲ್ಲಿ 735 ಪ್ರಖರಣಗಳು ಬೆಳಕಿಗೆ ಬಂದಿವೆ. ಅಲ್ಲದೇ ಇದರೊಂದಿಗೆ ಬೆಂಗಳೂರಿನಲ್ಲಿ ಕೊರೋನಾ ಸೋಂಕಿಗೆ ಇಬ್ಬರು ಬಲಿಯಾಗಿದ್ದಾರೆ ಎಂದು ತಿಳಿದುಬಂದಿದೆ.
ಇನ್ನು ಜಿಲ್ಲಾವಾರು ಸೋಂಕಿತರ ಸಂಖ್ಯೆಯನ್ನು ನೋಡುವುದಾದರೆ ಬೆಂಗಳೂರು ನಗರ 735, ಬಳ್ಳಾರಿ 85, ದಕ್ಷಿಣ ಕನ್ನಡ 84, ಧಾರವಾಡ-35, ಬೆಂಗಳೂರು ಗ್ರಾಮಾಂತರ 29, ವಿಜಯಪುರ 28, ಹಾಸನ 28, ಉತ್ತರ ಕನ್ನಡ 23, ಉಡುಪಿ 22, ಚಾಮರಾಜನಗರ 21, ಬಾಗಲಕೋಟೆ 20, ತುಮಕೂರು 19, ದಾವಣಗೆರೆ 16, ಚಿಕ್ಕಬಳ್ಳಾಪುರ 15, ಕಲಬುರಗಿ 14, ರಾಮನಗರ 14, ಕೊಪ್ಪಳ 13, ರಾಯಚೂರು 12, ಚಿತ್ರದುರ್ಗ 12, ಯಾದಗಿರಿ 8, ಬೀದರ್ 8, ಬೆಳಗಾವಿ 8, ಕೊಡಗು 7, ಮಂಡ್ಯ 5, ಕೋಲಾರ 5, ಶಿವಮೊಗ್ಗ 3, ಗದಗ 2, ಚಿಕ್ಕಮಗಳೂರು 1 ಸೋಂಕಿತರು ದಾಖಲಾಗಿದ್ದಾರೆ.
ಇಂದಿನ ಸಾವಿನ ಸಂಖ್ಯೆ 07 ಕ್ಕೆ ಏರಿಕೆಯನ್ನು ಕಂಡಿದೇ.
ಇಂದು 145 ಜನರು ಗುಣಮುಖರಾಗಿ ಮನೆಗೆ ತೆರಳಿದ್ದು, ಇದರೊಂದಿಗೆ 8063ಜನರು ಗುಣಮುಖರಾದಂತಾಗಿದೆ.
ಸಂಜೆಯ ಪತ್ರಿಕಾ ಪ್ರಕಟಣೆ 01/07/2020.
ಸಂಪೂರ್ಣ ಪತ್ರಿಕಾ ಪ್ರಕಟಣೆಗಾಗಿ ಕೆಳಗೆ ಈ ಲಿಂಕನ್ನು ಕ್ಲಿಕ್ ಮಾಡಿ.https://t.co/YQcgY2KdtT @BMTC_BENGALURU @NammaBESCOM @tv9kannada @publictvnews @suvarnanewstv @timesofindia @prajavani @udayavani_web @TV5kannada @Vijaykarnataka @VVani4U pic.twitter.com/sttx21jEqg
— K’taka Health Dept (@DHFWKA) July 1, 2020
ಆರೋಗ್ಯ ಇಲಾಖೆ ಬಿಡುಗಡೆ ಮಾಡಿರುವ ಬುಲೆಟಿನ್ ಅನ್ವಯ, ಬೆಂಗಳೂರು, ಬೀದರ್ ನಲ್ಲಿ ತಲಾ 2, ದಕ್ಷಿಣ ಕನ್ನಡ, ಹಾಸನ, ಬೆಳಗಾವಿಯಲ್ಲಿ ತಲಾ ಒಂದು ಸಾವಿನ ಪ್ರಕರಣ ವರದಿಯಾಗಿದೆ. ರಾಜ್ಯದಲ್ಲಿ ಒಟ್ಟು 292 ಸೋಂಕಿತ ಸ್ಥಿತಿ ಗಂಭೀರವಾಗಿದ್ದು, ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬೆಂಗಳೂರು ನಗರವೊಂದರಲ್ಲೇ ಬರೋಬ್ಬರಿ 191 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.