317-new-covid19-positive-cases-reported-in-karnataka

ಬೆಂಗಳೂರು (ಜೂ.28): ಇಂದು ರಾಜ್ಯದಲ್ಲಿ ಕೊರೊನಾ ತನ್ನ ಅಟ್ಟಹಾಸವನ್ನು ತೋರಿಸಿದ್ದು, ಕರ್ನಾಟಕದ ಜನತೆ ಬೆಚ್ಚಿ ಬಿದ್ದಿದ್ದಾರೆ.  ಇಂದು ಒಂದೇ ದಿನದಲ್ಲಿ 1267 ಮಂದಿಗೆ ಸೋಂಕು ಕಾಣಿಸಿಕೊಳ್ಳುವ ಮೂಲಕ ಜನರಿಗೆ ಎಚ್ಚರಿಕೆಯ ಸಂದೇಶ ರವಾನಿಸಿದೆ. ಇದರೊಂದಿಗೆ ರಾಜ್ಯದಲ್ಲಿನ ಒಟ್ಟು ಸೋಂಕಿತರ ಸಂಖ್ಯೆ 13,190 ಕ್ಕೆ ಏರಿಕೆಯಾದಂತಾಗಿದೆ.

ಇಂದು ಕೊರೊನಾ ಸೋಂಕಿನಿಂದ ರಾಜ್ಯದಲ್ಲಿ 16 ಜನರು ಮೃತಪಟ್ಟಿದ್ದು, ಇಲ್ಲಿಯವರೆಗೆ ಸಾವನ್ನಪ್ಪಿದವರ ಸಂಖ್ಯೆ 211 ಕ್ಕೆ ಏರಿಕೆಯಾಗಿದೆ. ಬೆಂಗಳೂರು ನಗರ 4, ದಕ್ಷಿಣಕನ್ನಡ 3, ಬಾಗಲಕೋಟೆ 2, ತುಮಕೂರು 2, ಮೈಸೂರು 1, ಬಳ್ಳಾರಿ 1 ಕಲಬುರಗಿ 1 ಹಾಸನ 1, ಧಾರವಾಡ 1 ಸಾವಾಗಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ಇನ್ನು ಜಿಲ್ಲಾವಾರು ಸೋಂಕಿತರ ಸಂಖ್ಯೆ ನೋಡುವುದಾದರೆ ಬೆಂಗಳೂರು ನಗರ 783, ದಕ್ಷಿಣ ಕನ್ನಡ 97, ಬಳ್ಳಾರಿ 71, ಉಡುಪಿ 40, ಕಲಬುರಗಿ 34, ಹಾಸನ 31, ಗದಗ 30, ಬೆಂಗಳೂರು ಗ್ರಾಮಾಂತರ 27, ಧಾರವಾಡ 18, ಮೈಸೂರು 18, ಬಾಗಲಕೋಟೆ 17, ಉತ್ತರ ಕನ್ನಡ 14, ಹಾವೇರಿ 12, ಕೋಲಾರ 11, ಬೆಳಗಾವಿ 8, ಬೀದರ್ 7, ಚಿತ್ರದುರ್ಗ 7, ರಾಯಚೂರು 6,ಮಂಡ್ಯ 6, ದಾವಣಗೆರೆ 6, ವಿಜಯಪುರ 5, ಶಿವಮೊಗ್ಗ 4, ಚಿಕ್ಕಬಳ್ಳಾಪುರ 3, ಕೊಪ್ಪಳ 3, ಚಿಕ್ಕಮಂಗಳೂರು 3, ಕೊಡಗು 3, ತುಮಕೂರು 2, ಯಾದಗಿರಿ 1 ಪ್ರಕರಣಗಳು ದಾಖಲಾಗಿವೆ.

LEAVE A REPLY

Please enter your comment!
Please enter your name here