120-new-cases-found-in-karnataka

ಬೆಂಗಳೂರು (ಜೂನ್ 10): ರಾಜ್ಯದಲ್ಲಿಂದು ಹೊಸದಾಗಿ 120 ಕೋವಿಡ್-19 ಪಾಸಿಟಿವ್ ಪ್ರಖರಣಗಳು ಬೆಳಕಿಗೆ ಬಂದಿವೆ. ಇದರೊಂದಿಗೆ ರಾಜ್ಯದ ಒಟ್ಟು ಸೋಂಕಿತರ ಸಂಖ್ಯೆ ಆರು ಸಾವಿರದ ಗಡಿಯನ್ನು ದಾಟಿದಂತಾಗಿದೆ.

ರಾಜ್ಯದಲ್ಲಿ ಸೋಂಕಿತರ ಸಂಖ್ಯೆಯು ಗಣನೀಯವಾಗಿ ಏರಿಕೆಯನ್ನು ಕಾಣುತ್ತಿದ್ದು, ಇಂದಿಗೆ ಆರು ಸಾವಿರದ ಗಡಿಯನ್ನು ದಾಟಿದೆ. ಇಂದಿಗೆ ರಾಜ್ಯದಲ್ಲಿ ಒಟ್ಟು ಕೋವಿಡ್-19 ಸೋಂಕಿತರ ಸಂಖ್ಯೆ 6041 ಕ್ಕೆ ತಲುಪಿದೆ. ಇವರಲ್ಲಿ 3108 ಜನರು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆಯನ್ನು ಪಡೆದುಕೊಳ್ಳುತ್ತಿದ್ದು, 14 ಜನರು ಐ.ಸಿ.ಯು. ಚಿಕಿತ್ಸೆಗೆ ಸಧ್ಯ ಪಡೆದುಕೊಳ್ಳುತ್ತಿದ್ದಾರೆ.

ಇಂದು ಪತ್ತೆಯಾದ ಸೋಂಕಿತರಲ್ಲಿ 68 ಜನರು ಅಂತರಾಜ್ಯ ಪ್ರಯಾಣದ ಹಿನ್ನೆಲೆಯನ್ನು ಹೊಂದಿದ್ದರೆ, ಇನ್ನು 3 ಜನರು ಅಂತರಾಷ್ಟ್ರೀಯ ಪ್ರಯಾಣದ ಹಿನ್ನೆಲೆಯವರಾಗಿದ್ದಾರೆ.

ಕೊರೊನಾ ಸೋಂಕಿನಿಂದಾಗಿ ಇಂದು ಮೂವರು ಮೃತಪಟ್ಟಿದ್ದು, ಇದರೊಂದಿಗೆ ಒಟ್ಟು 69 ಜನರು ಈ ಸೋಂಕಿನಿಂದ ಕೊನೆಯುಸಿರೆಳೆದಂತಾಗಿದೆ. ಧಾರವಾಡದ 58 ವರ್ಷದ ವ್ಯಕ್ತಿ, ಬೆಂಗಳೂರು ನಗರದ 57 ವರ್ಷದ ವ್ಯಕ್ತಿ ಮತ್ತು 32 ವರ್ಷದ ವ್ಯಕ್ತಿ ಮೃತ ಪಟ್ಟವರಾಗಿದ್ದಾರೆ.

ಇಂದು ಸೋಂಕಿಗೆ ಒಳಗಾದವರ ಜಿಲ್ಲಾವಾರು ಸಂಖ್ಯೆಯನ್ನು ನೋಡುವುದಾದರೆ ಬೆಂಗಳೂರು ನಗರ 42, ಯಾದಗಿರಿ 27, ವಿಜಯಪುರ 13,  ಕಲಬುರಗಿ 11, ಬೀದರ್ 5, ಧಾರವಾಡ 4, ದಕ್ಷಿಣ ಕನ್ನಡ 4,  ದಾವಣಗೆರೆ 3, ಹಾಸನ 3, ಬಳ್ಳಾರಿ 3, ಬಾಗಲಕೋಟೆ 2, ರಾಮನಗರ 2, ಬೆಳಗಾವಿ 1 ಪ್ರಕರಣಗಳು ದಾಖಲಾಗಿವೆ.

 

LEAVE A REPLY

Please enter your comment!
Please enter your name here