12-civilians-injured-as-terrorists-lob-grenade-at-security-personnel-in-j-ks-pulwama

ಪುಲ್ವಾಮಾ: ಜಮ್ಮು ಕಾಶ್ಮೀರದ ಪುಲ್ವಾಮದಲ್ಲಿ ಇಂದು ಭದ್ರತಾಪಡೆಯನ್ನು ಗುರಿಯಾಗಿಸಿಕೊಂಡು ಭಯೋತ್ಪಾದಕರ ಗುಂಪು ಗ್ರೆನೇಡ್ ದಾಳಿ ನಡೆಸಿದೆ. ಈ ದಾಳಿಯಲ್ಲಿ 12 ಮಂದಿ ನಾಗರಿಕರು ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.

ಪುಲ್ವಾಮಾದ ಕಾಕಪೋರಾ ಎನ್ನುವ ಪ್ರದೇಶದಲ್ಲಿ ಈ ದಾಳಿ ನಡೆದಿದ್ದು, ಸಿಆರ್ ಪಿ ಎಫ್ ಮತ್ತು ಪೊಲೀಸರನ್ನು ಗುರಿಯಾಗಿಸಿಕೊಂಡು ಈ ದಾಳಿಯನ್ನು ನಡೆಸಲಾಗಿತ್ತು ಎಂದು ತಿಳಿದು ಬಂದಿದೆ. ಆದರೆ ಉದ್ದೇಶಿತ ಗುರಿಯನ್ನು ಅದು ತಲುಪುವಲ್ಲಿ ವಿಫಲವಾಗಿದೆ. ಇದರಿಂದಾಗಿ ಉಂಟಾಗಬಹುದಾದ ಬಾರಿ ಅನಾಹುತವೊಂದು ತಪ್ಪಿದೆ. ಆದರೆ ಅಲ್ಲಿನ ಸ್ಥಳೀಯ 12 ನಾಗರೀಕರಿಗೆ ಗಾಯಗಳಾಗಿದ್ದು, ತಕ್ಷಣವೇ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.

ಭದ್ರತಾ ಪಡೆಗಳು ದಾಳಿ ನಡೆದ ಪ್ರದೇಶವನ್ನು ಈಗಾಗಲೇ ಸುತ್ತುವರೆದಿದ್ದು, ದಾಳಿಕೋರರಿಗಾಗಿ ಶೋಧಕಾರ್ಯ ನಡೆಸಿದ್ದಾರೆ.

LEAVE A REPLY

Please enter your comment!
Please enter your name here