11958-new-coronavirus-cases-found-in-karnataka

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಸೋಂಕು ಇಳಿಮುಖವಾಗಿದ್ದು, ಇಂದು ಕಳೆದ ೨೪ ಗಂಟೆಗಳಲ್ಲಿ 1,958 ಹೊಸ ಕರೋನಾ ಪ್ರಕರಣಗಳು ಪತ್ತೆಯಾಗಿವೆ. ಇದರೊಂದಿಗೆ ಇಲ್ಲಿಯವರೆಗೆ ರಾಜ್ಯದದಲ್ಲಿ ಪತ್ತೆಯಾದ ಸೋಂಕಿತರ ಸಂಖ್ಯೆ 27,07,481 ಕ್ಕೆ ಏರಿಕೆಯಾದಂತಾಗಿದೆ.

ರಾಜ್ಯದಲ್ಲಿ ಇಂದು 27,299 ಜನರು ಕೊರೋನಾ ಸೋಂಕಿನಿಂದ ಗುಣಮುಖರಾಗಿದ್ದಾರೆ. ಇದರೊಂದಿಗೆ ರಾಜ್ಯದಲ್ಲಿ ಇಲ್ಲಿಯವರೆಗೆ ಗುಣಮುಖರಾದವರ ಸಂಖ್ಯೆ 24,36,716 ಕ್ಕೆ ಏರಿಕೆಯಾಗಿದೆ. ಇನ್ನೂ ರಾಜ್ಯದಲ್ಲಿ ಸೋಂಕಿನಿಂದ 2,80,186 ಗುಣಮುಖರಾಗಬೇಕಾಗಿದ್ದು, ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.

ಜಿಲ್ಲಾವಾರು ಸೋಂಕಿತರ ಸಂಖ್ಯೆ

ಜಿಲ್ಲಾವಾರು ಸೋಂಕಿತರ ಸಂಖ್ಯೆಯನ್ನು ನೋಡುವುದಾದರೆ, ಬಾಗಲಕೋಟೆ 112, ಬಳ್ಳಾರಿ 267, ಬೆಳಗಾವಿ 15, ಬೆಂಗಳೂರು ಗ್ರಾಮಾಂತರ 292, ಬೆಂಗಳೂರು ನಗರ 1992, ಬೀದರ್ 13, ಚಾಮರಾಜನಗರ 209, ಚಿಕ್ಕಬಳ್ಳಾಪುರ 282, ಚಿಕ್ಕಮಗಳೂರು 365, ಚಿತ್ರದುರ್ಗ 294, ದಕ್ಷಿಣ ಕನ್ನಡ 408, ದಾವಣಗೆರೆ 380, ಧಾರವಾಡ 313, ಗದಗ 141, ಹಾಸನ 1108, ಹಾವೇರಿ 179, ಕಲಬುರಗಿ 67, ಕೊಡಗು 230, ಕೋಲಾರ 298, ಕೊಪ್ಪಳ 155, ಮಂಡ್ಯ 597, ಮೈಸೂರು 1213, ರಾಯಚೂರು 64, ರಾಮನಗರ 48, ಶಿವಮೊಗ್ಗ 1224, ತುಮಕೂರು 420, ಉಡುಪಿ 394, ಉತ್ತರ ಕನ್ನಡ 364, ವಿಜಯಪುರ 137, ಯಾದಗಿರಿ 37 ಪ್ರಕರಣಗಳು ದಾಖಲಾಗಿವೆ.

ಇದನ್ನೂ ಓದಿರಿ: Live Updates: ದೇಶದ ಜನತೆಗೆ ಮೋದಿ ಭರ್ಜರಿ ಸಿಹಿಸುದ್ದಿ !

LEAVE A REPLY

Please enter your comment!
Please enter your name here