ಬೆಂಗಳೂರು: ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ 11,042 ಪ್ರಕರಣಗಳು ಪತ್ತೆಯಾಗಿವೆ. ಇದರೊಂದಿಗೆ ಇಂದು 15,721 ಸೋಂಕಿತರು ಗುಣಮುಖರಾಗಿದ್ದಾರೆ.
ಬೆಂಗಳೂರು ನಗರದಲ್ಲಿ ಇಂದು ಒಂದೇ ದಿನದಲ್ಲಿ 2191 ಪ್ರಕರಣಗಳು ಪತ್ತೆಯಾಗಿವೆ. ಇದರೊಂದಿಗೆ 47 ಸೋಂಕಿತರ ಸಾವಾಗಿದೆ ಎಂದು ಆರೋಗ್ಯ ಇಲಾಖೆಯ ಮಾಹಿತಿ ತಿಳಿಸಿದೆ. ನಗರದಲ್ಲಿ ಇಂದು 4846 ಸೋಂಕಿತರು ಗುಣಮುಖರಾಗಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನೂ ಓದಿರಿ: Karnataka Unlock Guidelines: 11 ಜಿಲ್ಲೆಗಳಲ್ಲಿ ಮಾತ್ರ ಲಾಕ್ಡೌನ್; ಇನ್ನುಳಿದ ಜಿಲ್ಲೆಗಳು 14 ರಿಂದ ಅನ್ಲಾಕ್
ಸೋಂಕಿನಿಂದ ಇಂದು 194 ಕೋವಿಡ್ ರೋಗಿಗಳು ಮೃತಪಟ್ಟಿದ್ದು, ಒಟ್ಟಾರೇ ರಾಜ್ಯದ ಕೋವಿಡ್ ಮೃತರ ಸಂಖ್ಯೆ 32,485 ಆಗಿದೆ. ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 2,10,652 ಕ್ಕೆ ಇಳಿಕೆಯಾಗಿದೆ.
ಇಂದಿನ 10/06/2021 ಸಂಪೂರ್ಣ ಪತ್ರಿಕಾ ಪ್ರಕಟಣೆಗಾಗಿ ಇಲ್ಲಿ ನೀಡಲಾಗಿರುವ ಲಿಂಕ್ ಅನ್ನು ಕ್ಲಿಕ್ ಮಾಡಿ.https://t.co/54WoDUHzSK @CMofKarnataka @drashwathcn@GovindKarjol @LaxmanSavadi @mla_sudhakar @BBMPCOMM @DC_Dharwad @DCKodagu @dcudupi @DCDK9 @mysurucitycorp @mangalurucorp @CEOUdupi pic.twitter.com/WEoZKiDGdg
— K’taka Health Dept (@DHFWKA) June 10, 2021
ಜಿಲ್ಲಾವಾರು ಸೋಂಕಿತರ ಮಾಹಿತಿ :
ಜಿಲ್ಲಾವಾರು ಮಾಹಿತಿಯನ್ನು ನೋಡುವುದಾದರೆ, ಬಾಗಲಕೋಟೆ 72, ಬಳ್ಳಾರಿ 293, ಬೆಳಗಾವಿ 439, ಬೆಂಗಳೂರು ಗ್ರಾಮಾಂತರ 264, ಬೆಂಗಳೂರು ನಗರ 2191, ಬೀದರ್ 20, ಚಾಮರಾಜನಗರ 274, ಚಿಕ್ಕಬಳ್ಳಾಪುರ 280, ಚಿಕ್ಕಮಗಳೂರು 397, ಚಿತ್ರದುರ್ಗ 349, ದಕ್ಷಿಣ ಕನ್ನಡ 580, ದಾವಣಗೆರೆ 313, ಧಾರವಾಡ 261, ಗದಗ 90, ಹಾಸನ 776, ಹಾವೇರಿ 67, ಕಲಬುರಗಿ 58, ಕೊಡಗು 279, ಕೋಲಾರ 247, ಕೊಪ್ಪಳ 161, ಮಂಡ್ಯ 448, ಮೈಸೂರು 1011, ರಾಯಚೂರು 115, ರಾಮನಗರ 59, ಶಿವಮೊಗ್ಗ 521, ತುಮಕೂರು 571, ಉಡುಪಿ 291, ಉತ್ತರ ಕನ್ನಡ 526, ವಿಜಯಪುರ 174, ಯಾದಗಿರಿ 15 ಪ್ರಕರಣಗಳು ಪತ್ತೆಯಾಗಿವೆ.
ಇದನ್ನೂ ಓದಿರಿ: ರಕ್ಷಿತ್ ಶೆಟ್ಟಿ ಬರ್ತಡೇಗೆ ಬಂತು ‘777 ಚಾರ್ಲಿ’ ಟೀಸರ್