10947-new-covid-cases-found-in-karnataka

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಹಾವಳಿ ಇಂದು ಜೋರಾಗಿಯೇ ನಡೆದಿದ್ದು, ಇಂದು ದಾಖಲೆಯ 10,947 ಕೋವಿಡ್-19 ಪ್ರಕರಣಗಳು ಪತ್ತೆಯಾಗಿದೆ. ಇದರೊಂದಿಗೆ ರಾಜ್ಯದಲ್ಲಿ ಇಲ್ಲಿಯವರೆಗೆ ಪತ್ತೆಯಾದ ಒಟ್ಟು ಸಂಖ್ಯೆ 6,68,652 ಕ್ಕೆ ಏರಿಕೆಯಾಗಿದೆ.

ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಅತ್ಯಧಿಕ ಅಂದರೆ 5,000 ಪ್ರಕರಣಗಳು ಪತ್ತೆಯಾಗಿದ್ದು, ಇದರೊಂದಿಗೆ ಬೆಂಗಳೂರಿನಲ್ಲಿ ಇಲ್ಲಿಯವರೆಗೆ 2,62,241 ಜನರಿಗೆ ಸೋಂಕು ತಗುಲಿದಂತಾಗಿದೆ. ಇದಲ್ಲದೆ ಇಂದು ಒಂದೇ ದಿನದಲ್ಲಿ ಬೆಂಗಳೂರು ಒಂದರಲ್ಲೇ 55 ಜನರು ಕೋವಿಡ್ ಸೋಂಕಿಗೆ ಬಲಿಯಾಗಿದ್ದಾರೆ ಎಂದು ಆರೋಗ್ಯ ಇಲಾಖೆ ತಮ್ಮ ವರದಿಯಲ್ಲಿ ತಿಳಿಸಿದೆ.

ಇದನ್ನು ಓದಿರಿ : ಮಾಸ್ಕ್ ದಂಡ ಪ್ರಮಾಣವನ್ನು ಒಂದು ಸಾವಿರದಿಂದ 250 ಕ್ಕೆ ಇಳಿಕೆ ಮಾಡಿದ ಸರಕಾರ

ರಾಜ್ಯದಲ್ಲಿ ಇಂದು 9,832 ಜನರು ಕೊರೋನಾ ಸೋಂಕಿನಿಂದ ಗುಣಮುಖರಾಗಿದ್ದು, ಇಲ್ಲಿಯವರೆಗೆ ಸೋಂಕಿನಿಂದ ಚೇತರಿಸಿಕೊಂಡವರ ಸಂಖ್ಯೆ 5,42,906 ಕ್ಕೆ ಏರಿಕೆಯಾಗಿದೆ. ಆದರೆ ಕೋವಿಡ್ ಸೋಂಕಿಗೆ ತುತ್ತಾಗಿ ಇನ್ನೂ ಬಳಲುತ್ತಿರುವವರ ಸಂಖ್ಯೆಯೂ ಹೆಚ್ಚಾಗಿಯೇ ಇದ್ದು, 1,16,153 ಜನರು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆಯನ್ನು ಪಡೆದುಕೊಳ್ಳುತ್ತಿದ್ದಾರೆ.

ರಾಜ್ಯದಲ್ಲಿ ಇಂದು ಒಂದೇ ದಿನದಲ್ಲಿ 113 ಜನರು ಸೋಂಕಿಗೆ ಬಲಿಯಾಗಿದ್ದಾರೆ. ಈ ಸಂಖ್ಯೆಯನ್ನು ಜಿಲ್ಲಾವಾರು ನೋಡುವುದಾದರೆ, ಬೆಂಗಳೂರು ನಗರ 55, ಮೈಸೂರು 9, ಬೆಂಗಳೂರು ಗ್ರಾಮಾಂತರ 2, ರಾಮಗರ 3, ಬಾಗಲಕೋಟೆ 3, ಕೋಲಾರ 4, ಹಾಸನ 5, ತುಮಕೂರು 5, ದಕ್ಷಿಣ ಕನ್ನಡ 7, ಉತ್ತರ ಕನ್ನಡ 7, ಉಡುಪಿ 2, ಧಾರವಾಡ 2, ಹಾವೇರಿ 2, ಕಲಬುರಗಿ 1, ಕೊಡಗು 1, ವಿಜಯಪುರ 1, ಬೀದರ್ 1, ಚಾಮರಾಜ ನಗರ 1, ಚಿಕ್ಕಮಗಳೂರು 1, ಬೆಳಗಾವಿ 1 ರು ಸಾವನ್ನಪ್ಪಿದ್ದಾರೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ರಾಜ್ಯದಲ್ಲಿ ಇಂದು ದಾಖಲೆಯ 10,947 ಜನರು ಸೋಂಕಿಗೆ ಒಳಗಾಗಿದ್ದು, ಯಾವ ಜಿಲ್ಲೆಯಲ್ಲಿ ಎಷ್ಟು ಎಂದು ನೋಡುವುದಾದರೆ, ಬೆಂಗಳೂರು ನಗರ 5,000, ಮೈಸೂರು 979, ಹಾಸನ 471, ಉತ್ತರ ಕನ್ನಡ 462, ದಕ್ಷಿಣ ಕನ್ನಡ 447, ಬಳ್ಳಾರಿ 258, ತುಮಕೂರು- 250, ಚಿತ್ರದುರ್ಗ 217, ಉಡುಪಿ 209, ಮಂಡ್ಯ 207, ಶಿವಮೊಗ್ಗ 203, ಬೆಂಗಳೂರು ಗ್ರಾಮಾಂತರ 189, ಬೆಳಗಾವಿ 186, ಚಿಕ್ಕಮಗಳೂರು 186, ಕಲಬುರಗಿ 180, ಧಾರವಾಡ 154, ದಾವಣಗೆರೆ 141, ರಾಯಚೂರು 129, ಬಾಗಲಕೋಟೆ 121, ಚಿಕ್ಕಬಳ್ಳಾಪುರ 115, ಚಾಮರಾಜನಗರ 104, ಕೋಲಾರ 104, ಕೊಡಗು 103, ಯಾದಗಿರಿ 98, ಕೊಪ್ಪಳ 98, ರಾಮನಗರ 77, ವಿಜಯಪುರ 73, ಗದಗ 72, ಹಾವೇರಿ- 57, ಬೀದರ್ 57 ಪ್ರಕರಣಗಳು ದಾಖಲಾಗಿವೆ.

LEAVE A REPLY

Please enter your comment!
Please enter your name here