4120-new-covid-19-cases-reported-in-karnataka

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಹಾವಳಿ ಮತ್ತೊಮ್ಮೆ ಜೋರಾಗಿದ್ದು, ಇಂದು ಒಂದೇ ದಿನದಲ್ಲಿ 10,913 ಕೊರೋನಾ ಪಾಸಿಟಿವ್ ಪ್ರಕರಣಗಳು ಬೆಳಕಿಗೆ ಬಂದಿವೆ. ಇದರೊಂದಿಗೆ ರಾಜ್ಯದಲ್ಲಿ ಒಟ್ಟಾರೆ ಕೊರೋನಾ ಪ್ರಕರಣಗಳ ಸಂಖ್ಯೆ 6,90,269 ಕ್ಕೆ ಏರಿಕೆಯಾಗಿದೆ.

ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಇಂದು 5009 ಜನರಲ್ಲಿ ಕೊರೋನಾ ಸೋಂಕು ಪತ್ತೆಯಾಗಿದ್ದು, ಬೆಂಗಳೂರಿನ ಒಟ್ಟು ಸೋಂಕಿತರ ಸಂಖ್ಯೆ 2,72,371 ಕ್ಕೆ ಏರಿಕೆಯಾಗಿದೆ. ಇಲ್ಲದೆ 3045 ಜನರು ಸೋಂಕಿನಿಂದ ಗುಣಮುಖರಾಗಿ ಮನೆಗಳಿಗೆ ತೆರಳಿದ್ದಾರೆ. ಇಂದು ಬೆಂಗಳೂರಿನಲ್ಲಿ 57 ಕೊರೋನಾ ಮರಣ ಪ್ರಕರಣವು ದಾಖಲಾಗಿದ್ದು, ಇಲ್ಲಿಯವರೆಗೆ ಬೆಂಗಳೂರಿನಲ್ಲಿ 3290 ಜನರು ಸಾವನ್ನಪ್ಪಿದ್ದಾರೆ ಎಂದು ಆರೋಗ್ಯ ಇಲಾಖೆಯು ತಿಳಿಸಿದೆ.

ರಾಜ್ಯದಲ್ಲಿ ಕೊರೋನಾ ಸೋಂಕಿನಿಂದ 9091 ಜನರು ಗುಣಮುಖರಾಗಿದ್ದಾರೆ. ಇದಲ್ಲದೆ ಇನ್ನೂ 1,18,851 ಜನರು ಸೋಂಕಿಗೆ ತುತ್ತಾಗಿ ಚಿಕಿತ್ಸೆಯನ್ನು ಪಡೆದುಕೊಳ್ಳುತ್ತಿದ್ದಾರೆ. ರಾಜ್ಯದಲ್ಲಿ ಇಂದು 114 ಕೋವಿಡ್ ಸಾವು ಉಂಟಾಗಿದ್ದು, ಇಲ್ಲಿಯವರೆಗೆ ಕೋವಿಡ್ ನಿಂದ ಸಾವನ್ನಪ್ಪಿದವರ ಸಂಖ್ಯೆ 9789 ಕ್ಕೆ ಏರಿಕೆಯಾಗಿದೆ.

ಇಂದು ಪತ್ತೆಯಾದ 10,913 ಕೊರೋನಾ ಪ್ರಕರಣಗಳಲ್ಲಿ ಜಿಲ್ಲಾವಾರು ಸೋಂಕಿತರ ಸಂಖ್ಯೆಯನ್ನು ನೋಡುವುದಾರೆ, ಬೆಂಗಳೂರು ನಗರ 5009, ಮೈಸೂರು 826, ಹಾಸನ 489, ದಾವಣಗೆರೆ 450, ಚಿತ್ರದುರ್ಗ 418, ದಕ್ಷಿಣ ಕನ್ನಡ 376, ತುಮಕೂರು 366, ಬೆಳಗಾವಿ 269, ಮಂಡ್ಯ 250, ಬೆಂಗಳೂರು ಗ್ರಾಮಾಂತರ 242, ಬಳ್ಳಾರಿ 217, ಉತ್ತರ ಕನ್ನಡ 196, ಉಡುಪಿ 177, ಕೋಲಾರ 156, ಚಿಕ್ಕಬಳ್ಳಾಪುರ 154, ಧಾರವಾಡ 150, ಕಲಬುರಗಿ 144, ಶಿವಮೊಗ್ಗ 140, ಚಿಕ್ಕಮಗಳೂರು 129, ರಾಮನಗರ 125, ವಿಜಯಪುರ 92, ಬಾಗಲಕೋಟೆ 76, ಹಾವೇರಿ 75, ರಾಯಚೂರು 73, ಚಾಮರಾಜನಗರ 72, ಗದಗ 68, ಯಾದಗಿರಿ 66, ಕೊಪ್ಪಳ 65, ಕೊಡಗು 31, ಬೀದರ್ 12 ಪ್ರಕರಣಗಳು ಪತ್ತೆಯಾಗಿವೆ.

LEAVE A REPLY

Please enter your comment!
Please enter your name here