3176-new-covid-19-cases-reported-in-karnataka

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಹಾವಳಿ ಕಳೆದೆರಡು ದಿನಗಳಿಂದ ಮೊದಲಿಗಿಂತಲೂ ಹೆಚ್ಚಿದ್ದು, ಇಂದು 10,704 ಜನರಿಗೆ ಪಾಸಿಟಿವ್ ಬಂದಿದೆ. ಇದರೊಂದಿಗೆ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 6,79,356 ಏರಿಕೆಯಾಗಿದೆ.

ಬೆಂಗಳೂರಿನಲ್ಲಿ ಇಂದು ೨೪ ಗಂಟೆಗಳಲ್ಲಿ 5,121 ಪ್ರಕರಣಗಳು ಪತ್ತೆಯಾಗಿವೆ. ಇದರೊಂದಿಗೆ ಇಲ್ಲಿನ ಒಟ್ಟು ಸೋಂಕಿತರ ಸಂಖ್ಯೆ 2,67,362 ಕ್ಕೆ ಏರಿಕೆಯಾಗಿದೆ. ಅಲ್ಲದೇ ಇಂದು 43 ಜನರು ಸಾವನ್ನಪ್ಪಿದ್ದು, ಇಲ್ಲಿಯವರೆಗೆ ಬೆಂಗಳೂರಿನಲ್ಲಿ 3,233 ಕೋವಿಡ್ ಮರಣವು ಉಂಟಾಗಿದೆ.

ಇಂದು ಪತ್ತೆಯಾದ ಪ್ರಕರಣಗಳಲ್ಲಿ ಜಿಲ್ಲಾವಾರು ಸಂಖ್ಯೆಯನ್ನು ನೋಡುವುದಾದರೆ ಬೆಂಗಳೂರು ನಗರ 5000, ಮೈಸೂರು 979, ಹಾಸನ 471, ಉತ್ತರ ಕನ್ನಡ 462, ದಕ್ಷಿಣ ಕನ್ನಡ 447, ಬಳ್ಳಾರಿ 258, ತುಮಕೂರು 250, ಚಿತ್ರದುರ್ಗ 217, ಉಡುಪಿ 209, ಮಂಡ್ಯ 207, ಶಿವಮೊಗ್ಗ 203, ಬೆಂಗಳೂರು ಗ್ರಾಮಾಂತರ 189, ಬೆಳಗಾವಿ 186, ಚಿಕ್ಕಮಗಳೂರು 186, ಕಲಬುರಗಿ 180, ಧಾರವಾಡ 154, ದಾವಣಗೆರೆ 141, ರಾಯಚೂರು 129, ಬಾಗಲಕೋಟೆ 121, ಚಿಕ್ಕಬಳ್ಳಾಪುರ 115, ಚಾಮರಾಜನಗರ 104, ಕೋಲಾರ 104, ಕೊಡಗು 103, ಯಾದಗಿರಿ 98, ಕೊಪ್ಪಳ 98, ರಾಮನಗರ 77, ವಿಜಯಪುರ 73, ಗದಗ 72, ಹಾವೇರಿ 57, ಬೀದರ್ 57 ಪ್ರಕರಣಗಳು ಪತ್ತೆಯಾಗಿವೆ.

LEAVE A REPLY

Please enter your comment!
Please enter your name here