ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಹಾವಳಿ ಮತ್ತೊಮ್ಮೆ ಜೋರಾಗಿದ್ದು, ಇಂದು ಒಂದೇ ದಿನದಲ್ಲಿ 10,517 ಕೊರೋನಾ ಪಾಸಿಟಿವ್ ಪ್ರಕರಣಗಳು ಬೆಳಕಿಗೆ ಬಂದಿವೆ. ಇದರೊಂದಿಗೆ ರಾಜ್ಯದಲ್ಲಿ ಒಟ್ಟಾರೆ ಕೊರೋನಾ ಪ್ರಕರಣಗಳ ಸಂಖ್ಯೆ 7,00,786 ಕ್ಕೆ ಏರಿಕೆಯಾಗಿದೆ.
ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಇಂದು 4,563 ಜನರಲ್ಲಿ ಕೊರೋನಾ ಸೋಂಕು ಪತ್ತೆಯಾಗಿದ್ದು, ಬೆಂಗಳೂರಿನ ಒಟ್ಟು ಸೋಂಕಿತರ ಸಂಖ್ಯೆ 2,76,934 ಕ್ಕೆ ಏರಿಕೆಯಾಗಿದೆ. ಇಲ್ಲದೆ 1,726 ಜನರು ಸೋಂಕಿನಿಂದ ಗುಣಮುಖರಾಗಿ ಮನೆಗಳಿಗೆ ತೆರಳಿದ್ದಾರೆ. ಇಂದು ಬೆಂಗಳೂರಿನಲ್ಲಿ 30 ಕೊರೋನಾ ಮರಣ ಪ್ರಕರಣವು ದಾಖಲಾಗಿದ್ದು, ಇಲ್ಲಿಯವರೆಗೆ ಬೆಂಗಳೂರಿನಲ್ಲಿ 3320 ಜನರು ಸಾವನ್ನಪ್ಪಿದ್ದಾರೆ ಎಂದು ಆರೋಗ್ಯ ಇಲಾಖೆಯು ತಿಳಿಸಿದೆ.
ರಾಜ್ಯದಲ್ಲಿ ಕೊರೋನಾ ಸೋಂಕಿನಿಂದ 8,337 ಜನರು ಗುಣಮುಖರಾಗಿದ್ದಾರೆ. ಇದಲ್ಲದೆ ಇನ್ನೂ 1,20,929 ಜನರು ಸೋಂಕಿಗೆ ತುತ್ತಾಗಿ ಚಿಕಿತ್ಸೆಯನ್ನು ಪಡೆದುಕೊಳ್ಳುತ್ತಿದ್ದಾರೆ. ರಾಜ್ಯದಲ್ಲಿ ಇಂದು 102 ಕೋವಿಡ್ ಸಾವು ಉಂಟಾಗಿದ್ದು, ಇಲ್ಲಿಯವರೆಗೆ ಕೋವಿಡ್ ನಿಂದ ಸಾವನ್ನಪ್ಪಿದವರ ಸಂಖ್ಯೆ 9,891 ಕ್ಕೆ ಏರಿಕೆಯಾಗಿದೆ.
ಇಂದು ಪತ್ತೆಯಾದ 10,517 ಕೊರೋನಾ ಪ್ರಕರಣಗಳಲ್ಲಿ ಜಿಲ್ಲಾವಾರು ಸೋಂಕಿತರ ಸಂಖ್ಯೆಯನ್ನು ನೋಡುವುದಾರೆ, ಬೆಂಗಳೂರು ನಗರ 4563, ಬೆಳಗಾವಿ 515, ಮೈಸೂರು 465, ಹಾಸನ 455, ಚಿತ್ರದುರ್ಗ 447, ತುಮಕೂರು 374, ದಾವಣಗೆರೆ 345, ದಕ್ಷಿಣ ಕನ್ನಡ 316, ಶಿವಮೊಗ್ಗ 259, ಮಂಡ್ಯ 248, ಚಿಕ್ಕಮಗಳೂರು 241, ಉಡುಪಿ 237, ಬಳ್ಳಾರಿ 225, ಬೆಂಗಳೂರು ಗ್ರಾಮಾಂತರ 224, ಕೊಡಗು 216, ಕೋಲಾರ 174, ಧಾರವಾಡ 141, ವಿಜಯಪುರ 130, ಬಾಗಲಕೋಟೆ 124, ಚಿಕ್ಕಬಳ್ಳಾಪುರ 122, ಕಲಬುರಗಿ 104, ರಾಯಚೂರು 93, ಉತ್ತರ ಕನ್ನಡ 89, ಕೊಪ್ಪಳ 84, ಯಾದಗಿರಿ 73, ಚಾಮರಾಜನಗರ 79, ರಾಮನಗರ 68, ಹಾವೇರಿ 51, ಗದಗ 32, ಬೀದರ್ 23 ಪ್ರಕರಣಗಳು ಪತ್ತೆಯಾಗಿವೆ.
ಇಂದಿನ 10/10/2020 ಸಂಪೂರ್ಣ ಪತ್ರಿಕಾ ಪ್ರಕಟಣೆಗಾಗಿ ಇಲ್ಲಿ ನೀಡಲಾಗಿರುವ ಲಿಂಕ್ ಅನ್ನು ಕ್ಲಿಕ್ ಮಾಡಿ.@CMofKarnataka @BSYBJP @DVSadanandGowda @SureshAngadi_ @MoHFW_INDIA @UNDP_India @WHOSEARO @UNICEFIndia @sriramulubjp @drashwathcn @BSBommaihttps://t.co/NbEpCLlZGd pic.twitter.com/f1gsGcwU1s
— K’taka Health Dept (@DHFWKA) October 10, 2020