ಬೆಂಗಳೂರು (26 ಮೇ.): ರಾಜ್ಯದಲ್ಲಿ ಇಂದು ಮಧ್ಯಾಹ್ನದವರೆಗೆ ಶತಕ ದಾಖಲಿಸಿದ್ದ ಕೊರೊನಾ ಪ್ರಕರಣಗಳು, ಸಂಜೆಯ ಸುಮಾರಿಗೆ ಶಾಂತವಾಗಿ ಕೇವಲ 1 ಪ್ರಕರಣ ಮಾತ್ರ ಬರುವ ಮೂಲಕ ಸಮಾದಾನ ತಂದಿದೆ. ಈ ಮೂಲಕ ಕರ್ನಾಟಕದಲ್ಲಿ ಪತ್ತೆಯಾದ ಒಟ್ಟು ಪ್ರಕರಣಗಳ ಸಂಖ್ಯೆ 2283 ಕ್ಕೆ ಏರಿಕೆಯಾಗಿದೆ.
ಇಂದು ಮಧ್ಯಾಹ್ನದ ವೇಳೆಗೆ ಬಂದ ಆರೋಗ್ಯ ವರದಿಯಲ್ಲಿ 100 ಜನರಿಗೆ ಕೊರೊನಾ ಸೊಂಕಿರುವುದು ದೃಡಪಟ್ಟಿತ್ತು. ಇದು ಸಂಜೆಯ ವೇಳೆಗೆ ಎಲ್ಲಿಗೆ ಹೋಗಿ ನಿಲ್ಲುವುದೋ ಎನ್ನುವ ಆತಂಕದಲ್ಲಿದ್ದ ರಾಜ್ಯದ ಜನತೆಗೆ ಸಂಜೆಯ ವರದಿಯಲ್ಲಿ 1 ಪ್ರಕರಣ ದಾಖಲಾಗಿದ್ದು ಸಮಾಧಾನ ತಂದಿವೆ. ಇಂದು ದಾಖಲಾದ ಕೊವಿಡ್ ಪ್ರಕರಣಗಳಲ್ಲಿ ಅತೀ ಹೆಚ್ಚು ಪ್ರಕರಣಗಳು ಚಿತ್ರದುರ್ಗ(20) ದಿಂದ ಬಂದಿದ್ದು, ನಂತರದಲ್ಲಿ ಯಾದಗಿರಿ(14)ಯಿಂದ ದಾಖಲಾಗಿದೆ.
ಇನ್ನು ಇಂದಿನ ಪ್ರಕರಣಗಳನ್ನು ಜಿಲ್ಲಾವಾರು ನೋಡುವುದಾದರೆ ಚಿತ್ರದುರ್ಗ 20, ಯಾದಗಿರಿ 14, ಹಾಸನ 13, ದಾವಣಗೆರೆ 11, ಬೆಳಗಾವಿ 11, ಬೀದರ್ 10, ವಿಜಯಪುರ 5, ದಕ್ಷಿಣ ಕನ್ನಡ 3, ಉಡುಪಿ 3, ಬೆಂಗಳೂರು ನಗರ 2, ಕೋಲಾರ 2, ಚಿಕ್ಕಬಳ್ಳಾಪುರ, ಬಳ್ಳಾರಿ, ಕೊಪ್ಪಳ, ಬಾಗಲಕೋಟೆ ತಲಾ 1 ಪ್ರಕರಣಗಳು ದಾಖಲಾಗಿವೆ.
ಕೋವಿಡ್19: 26 ಮೇ 2020 ರ ಸಂಜೆಯವರೆಗಿನ ಮಾಹಿತಿ
— CM of Karnataka (@CMofKarnataka) May 26, 2020
ಒಟ್ಟು ಪ್ರಕರಣಗಳು: 2283
ಮೃತಪಟ್ಟವರು: 44
ಗುಣಮುಖರಾದವರು: 748
ಹೊಸ ಪ್ರಕರಣಗಳು: 101
ಇತರೆ ಮಾಹಿತಿ: ಜಿಲ್ಲಾವಾರು ಸೋಂಕಿತರು, ನಿಗದಿತ ಆಸ್ಪತ್ರೆಗಳಲ್ಲಿ ಪ್ರತ್ಯೇಕವಾಗಿರುವವರು, ಟೆಲಿಮೆಡಿಸಿನ್ ಸೌಲಭ್ಯದ ಮಾಹಿತಿ, ತಬ್ಲಿಘಿ ಜಮಾತ್ ನಲ್ಲಿ ಭಾಗವಹಿಸಿದವರಿಗೆ ಸೂಚನೆಗಳು, 1/3 pic.twitter.com/6FetrHLGYN