ನವದೆಹಲಿ : ಇಂದು ನಡೆದ ಕೇಂದ್ರ ಸಚಿವಸಂಪುಟ ಸಭೆಯಲ್ಲಿ ಮೇಲ್ವರ್ಘದ ಬಡವರಿಗೆ ಶೇ 10 ರಷ್ಟು ಮೀಸಲಾತಿಯನ್ನು ನೀಡವ ಸಲುವಾಗಿ ಕಾನೂನು ತಿದ್ದುಪಡಿ ತರಲು ಒಮ್ಮತದ ನಿರ್ಣಯ ಕೈಗೊಳ್ಳಲಾಗಿದೆ .

ಕೇಂದ್ರ ಸರಕಾರ ತೆಗೆದುಕೊಂಡ ಈ ನಿರ್ಣಯವು ಲೋಕಸಭೆ ಚುನಾವಣೆಯ ದೃಷ್ಟಿಯಿಂದ ನೋಡಿದಾಗ ಬಿಜೆಪಿಗೆ ವರವಾಗುವ ಎಲ್ಲ ಸಾಧ್ಯತೆಗಳು ಕಂಡು ಬರುತ್ತವೆ. ಮೋದಿಯವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರ ಕೈಗೊಂಡಿದ್ದು, ಈ ನಿಯಮದಿಂದ ಮೇಲ್ವರ್ಗದ ಜಾತಿ ಮತ್ತು ಸಮುದಾಯಗಳಿಗೆ ಸರಕಾರಿ ಉದ್ಯೋಗದಲ್ಲಿ ಶೇ. 10 ರಷ್ಟು ಮೀಸಲಾತಿ ದೊರೆಯಲಿದೆ.

ಕೇಂದ್ರ ಸರಕಾರ ನೀಡುವ ಈ ಮೀಸಲಾತಿಯನ್ನು ಪಡೆಯಲು ಕೆಲವು ಮಾನದಂಡಗಳು ಇದ್ದು, ಅವುಗಳು ಯಾವವು ಎಂಬುದನ್ನು ಸಂಕ್ಷಿಪ್ತವಾಗಿ ತಿಳಿಯೋಣ….

  • ಶಿಕ್ಷಣ ಮತ್ತು ಸರಕಾರಿ ಉದ್ಯೋಗದಲ್ಲಿ ಮೇಲ್ವರ್ಗದ ಮೀಸಲಾತಿಯ ಸೌಲಭ್ಯವನ್ನು ಪಡೆಯಲು ಆರ್ಥಿಕವಾಗಿ 8 ಲಕ್ಷಕ್ಕಿಂತಲೂ ಕಡಿಮೆ ವಾರ್ಷಿಕ ಆಧಾಯ ಹೊಂದಿರಬೇಕು.
  • ಈ ಮೀಸಲಾತಿಯನ್ನು ಪಡೆಯಲು 5 ಹೆಕ್ಟೇರ್ ಕ್ಕಿಂತಲೂ ಕಡಿಮೆ ಕೃಷಿ ಜಮೀನನ್ನು ಹೊಂದಿರುವ ಮೇಲ್ಜಾತಿಯವರು ಆಗಿರಬೇಕು.
  • 1000 ಚದರ ಅಡಿಗಿಂತಲೂ ಕಡಿಮೆ ವಿಸ್ತೀರ್ಣವಿರುವ ಮನೆಯನ್ನು ಹೊಂದಿದ ಮೇಲ್ಜಾತಿಯವರಾಗಿರಬೇಕು.
  • ಕೆಲವು ನಿಗದಿತ ಪುರಸಭೆಯಲ್ಲಿ 109 ಯಾರ್ಡ್ ಗಿಂತ ಕಡಿಮೆ ಮತ್ತು ನಿಗಧಿಯಾಗದ ಪುರಸಭೆಗಳಲ್ಲಿ 209 ಯಾರ್ಡ್ ಗಿಂತ ಕಡಿಮೆ ವಸತಿ ಸ್ಥಳವನ್ನು ಹೊಂದಿರಬೇಕು.
  • ಸಾಮಾನ್ಯವಾಗಿ ಈ ಮೀಸಲಾತಿಗೆ ಬ್ರಾಹ್ಮಣ, ಠಾಕೂರ್, ರಾಜಪುತ, ಜಾಟ್, ಪಟೇಲ, ಬನಿಯಾ ಈ ವರ್ಗಗಳು ಅರ್ಹವಾಗಿವೆ.

ಈ ಮೀಸಲಾತಿಯನ್ನು ಜಾರಿಗೆ ತರಲು ಕೇಂದ್ರ ಸರಕಾರ ಜನವರಿ 8 ರಂದೇ ಕಾನೂನಿಗೆ ತಿದ್ದುಪಡಿ ತರಲು ತಯಾರಿ ನಡೆಸಿದೆ. ಈ ತಿದ್ದುಪಡಿಯು 2019 ರ ಲೋಕಸಭಾ ಚುನಾವಣೆಯ ಹಿತದೃಷ್ಟಿಯಿಂದ ಬಿಜೆಪಿಗೆ ಎಲ್ಲ ರೀತಿಯ ಅನುಕೂಲವೂ ಆಗುವ ಲಕ್ಷಣಗಳು ಕಂಡುಬರುತ್ತಿದೆ. ಕೇಂದ್ರ ಸರಕಾರದ ಈ ನಿರ್ಧಾರವನ್ನು ಪ್ರಮುಖ ವಿರೋಧ ಪಕ್ಷವಾದ ಕಾಂಗ್ರೆಸ್ ಟೀಕಿಸಿದ್ದು, ಮೇಲ್ವರ್ಗದ ಬಡವರಿಗೆ ಮೀಸಲಾತಿ ನೀಡಲು ಸರಕಾರ ಕಳೆದ 4 ವರ್ಷಗಳಿಂದ ಯೋಚನೆ ಮಾಡಿರಲಿಲ್ಲ. ಆದರೆ ಚುನಾವಣೆಯ ನೀತಿ ಸಂಹಿತೆ ಜಾರಿಯಾಗುವ ಕೆಲವೇ ತಿಂಗಳುಗಳ ಮೊದಲು ಜಾರಿಗೆ ತರಲು ಹೊರಟಿದೆ. ಇದೊಂದು ಚುನಾವಣೆಯ ಗಿಮಿಕ್ ಅಷ್ಟೇ ಎಂದು ಹೇಳಿದೆ.

ಇದನ್ನೂ ಓದಿರಿ : ಪ್ರಧಾನಿ ಮೋದಿ ಸ್ಕಿಮ್ ನಿಂದ 23.9 ದಶಲಕ್ಷ ಮನೆಗಳಿಗೆ ವಿದ್ಯುತ್..!

Image Copyrights: google.com

LEAVE A REPLY

Please enter your comment!
Please enter your name here