ಕೊಲ್ಕತ್ತಾ: ಯಾಸ್ ಚಂಡಮಾರುತದ ಹೊಡೆತದಿಂದಾಗಿ ಪಶ್ಚಿಮ ಬಂಗಾಳದಲ್ಲಿ ಕನಿಷ್ಠ ಒಂದು ಕೋಟಿ ಜನ ಸಂಕಷ್ಟಕ್ಕಿಡಾಗಿದ್ದು, ಮೂರು ಲಕ್ಷ ಮನೆಗಳಿಗೆ ಹಾನಿಯಾಗಿದೆ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು ತಿಳಿಸಿದ್ದಾರೆ.
ಯಾಸ್ ಚಂಡಮಾರುತ ಬುಧವಾರ ಬೆಳಗ್ಗೆ ಒಡಿಶಾದ ಧಮ್ರಾ ಬಂದರಿನ ಬಳಿ 130-140 ಕಿ.ಮೀ ವೇಗದಲ್ಲಿ ಅಪ್ಪಳಿಸಿದ್ದು, ಅಪಾರ ಪ್ರಮಾಣದಲ್ಲಿ ಭೂಕುಸಿತ ಉಂಟಾಗಿದೆ. ಹಲವಾರು ಮನೆಗಳು ಧರೆಗುರುಳಿದ್ದು, ಮೀನುಗಾರಿಕೆಗೆ ಹೋರಾಟ ಒಬ್ಬ ಮೀನುಗಾರನ ಸಾವಾಗಿದೆ.
ಚಂಡಮಾರುತದ ಅಪಾಯವನ್ನು ತಡೆಗಟ್ಟುವ ನಿಟ್ಟಿನಲ್ಲಿ ಅಪಾಯಕಾರಿ ಪ್ರದೇಶಗಳಿಂದ 15,04,506 ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ಏನ್ ಡಿ ಆರ್ ಎಫ್ ತಂಡ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿದೆ. ಶೀಘ್ರದಲ್ಲೇ ಹಾನಿಗೀಡಾದ ಸ್ಥಳಗಳಿಗೆ ವೈಮಾನಿಕ ಸಮೀಕ್ಷೆ ನಡೆಸಲಾಗುತ್ತದೆ ಎಂದು ಸಿ ಎಂ ಮಮತಾ ಬ್ಯಾನರ್ಜಿ ಹೇಳಿದ್ದಾರೆ.
ಇದನ್ನೂ ಓದಿರಿ: ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್. ದೊರೆಸ್ವಾಮಿ ನಿಧನ