ನರೇಂದ್ರ ಮೋದಿಯವರು ತಮ್ಮ ಆಡಳಿತದಲ್ಲಿ ದೇಶವನ್ನು ಅಭಿವೃದ್ಧಿಯೆಡೆಗೆ ಕೊಂಡೊಯ್ಯಲು ಪ್ರಾಮಾಣಿಕವಾಗಿ ಪ್ರಯತ್ನವನ್ನು ಮಾಡಿದ್ದಾರೆ. ತಮ್ಮ ಆಡಳಿತದಲ್ಲಿ ಅನೇಕ ಕ್ರಾಂತಿಕಾರಕ ನಡೆಗಳನ್ನು ತೆಗೆದುಕೊಂಡು ಅದರಲ್ಲಿ ಯಶಸ್ಸನ್ನು ಗಳಿಸಿದ್ದಾರೆ. ಅಲ್ಲದೇ ದೇಶದ ರಕ್ಷಣೆ, ರಾಜತಾಂತ್ರಿಕ ಸಂಬಧ ಸೇರಿದಂತೆ ಅನೇಕ ವಿಷಯಗಳಲ್ಲಿ ಯಶಸ್ಸನ್ನು ಗಳಿಸಿದ್ದಾರೆ. ಇಂತಹ ದಿಶೆಯಲ್ಲಿ ಸಾಗಿರುವ ಆಡಳಿತ ತನ್ನ ಯಶಸ್ವಿ ಐದು ವರ್ಷಗಳನ್ನು ಪೂರೈಸುವ ಸಮಯ ಬಂದಿದ್ದು, ಜನತೆಯ ಮುಂದೆ ಬಂದು ಮತ್ತೊಮ್ಮೆ ಅವಕಾಶವನ್ನು ಕೊಡುವಂತೆ ಕೇಳುತ್ತಿದ್ದಾರೆ.

ಈ ಸಂದರ್ಭದಲ್ಲಿ ಮದ್ಯಂತರ ಬಜೆಟ್ ಘೋಷಿಸುವ ಸಮಯವನ್ನು ಸರಿಯಾಗಿ ಬಳಸಿಕೊಂಡಿರುವ ಕೇಂದ್ರ ಸರಕಾರ ತನ್ನ ಚುನಾವಣಾ ಪೂರ್ವ ಬಜೆಟ್ ನ್ನು ಮಂಡಿಸಿದೆ. ಇಂದು ಹಂಗಾಮಿ ವಿತ್ತ ಸಚಿವ ಪಿಯೂಷ್ ಗೋಯಲ್ ಅವರು ಬಜೆಟ್ ನ್ನು ಘೋಷಣೆ ಮಾಡಿದ್ದಾರೆ. ಇದರಲ್ಲಿನ ಅನೇಕ ಜನಪರ ಘೋಷಣೆಗಳು ಮಚ್ಚುಗೆಯನ್ನು ಗಳಿಸಿವೆ.

ಮಧ್ಯಂತರ ಬಜೆಟ್ ನ ವಿವಿಧ ಪ್ರಮುಖ ಅಂಶಗಳು :

 • ರಕ್ಷಣಾ ವಲಯಕ್ಕೆ (ಭಾರತಿಯ ಸೈನ್ಯ) ನೀಡುವ ವಾರ್ಷಿಕ ಬಜೆಟನ್ನು 3 ಲಕ್ಷಕೋಟಿಗೆ ಏರಿಕೆ.
 • ಸಣ್ಣ ಪ್ರಮಾಣದ ಭೂಮಿಯನ್ನು ಹೊಂದಿರುವ ರೈತರಿಗೆ ವರ್ಷಕ್ಕೆ ಆರು ಸಾವಿರ ರೂಪಾಯಿ ಖಾತ್ರಿ ವರಮಾನ.
 • ರೈತರ ವರಮಾನ ಯೋಜನೆಗೆ 75000 ಕೋಟಿ ರೂಪಾಯಿಗಳನ್ನು ತೆಗೆದಿರಿಸಿದ ಕೇಂದ್ರ ಸರಕಾರ.
 • ಸರಿಯಾದ ಸಮಯದಲ್ಲಿ ಸಾಲ ಮರುಪಾವತಿ ಮಾಡಿದ ರೈತರಿಗೆ ಮೂರು ಪರ್ಸೆಂಟ್ ವಿನಾಯಿತಿ ಮತ್ತು ಪ್ರಾಕೃತಿಕ ವಿಕೋಪಕ್ಕೆ ತುತ್ತಾದ ರೈತರಿಗೆ ಬಡ್ಡಿಯಲ್ಲಿ ಎರಡು ಪರ್ಸೆಂಟ್ ವಿನಾಯಿತಿ.
 • ಹನುಗಾರುಕೆ ಮತ್ತು ಮಿನುಗಾರಿಕೆಗಳಲ್ಲಿ ತೊಡಗಿಕೊಂಡಿರುವ ರೈತರ ಸಾಲಕ್ಕೆ ಎರಡು ಪರ್ಸೆಂಟ್ ವಿನಾಯಿತಿ.
 • ಆದಾಯ ತೆರಿಗೆ ವಿನಾಯಿತಿ ಮಿತಿಯನ್ನು 2,50,000 ದಿಂದ 5,00,000 ಕ್ಕೆ ಏರಿಕೆ.
 • ಐಟಿ ರಿಟರ್ನ್ಸ್ ಪ್ರಕ್ರಿಯೆ 24 ಗಂಟೆಯೊಳಗೆ ಮುಗಿಯಬೇಕು ಮತ್ತು ತಕ್ಷಣ ರಿಟರ್ನ್ಸ್ ಪಾವತಿಯಾಗುವಂತೆ ಜಾರಿ.
 • 2019-20 ನೇ ಸಾಲಿನ ಗ್ರಾಮ ಸಡಕ್ ಯೋಜನೆ ಅಡಿಯಲ್ಲಿ ರಸ್ತೆ ನಿರ್ಮಾಣಕ್ಕೆ ಬಜೆಟ್ ನಲ್ಲಿ 19000 ಕೋಟಿ ರುಪಾಯಿ ಮೀಸಲು.
 • ನರೇಗಾ ಯೋಜನೆಗೆ 60000 ಕೋಟಿ ಮೀಸಲು.
 • ತಿಂಗಳಿಗೆ 100 ರೂಪಾಯಿಯಂತೆ ಪಾವತಿಸಿದರೆ ಅಸಂಘಟಿತ ವಲಯದ ಅರವತ್ತು ವರ್ಷ ಮೇಲ್ಪಟ್ಟ ಕಾರ್ಮಿಕರಿಗೆ ತಿಂಗಳಿಗೆ 3000 ಪಿಂಚಣಿ ಯೋಜನೆ. ಇದರಿಂದಾಗಿ ಈ ವಲಯದ 10 ಕೋಟಿ ಕಾರ್ಮಿಕರಿಗೆ ಅನುಕೂಲವಾಗಲಿದೆ.
 • ಸಣ್ಣ ಹಾಗು ಮಧ್ಯಮ ಪ್ರಮಾಣದ ವ್ಯಾಪಾರವನ್ನು ಜಿಎಸ್ಟಿ ಅಡಿಯಲ್ಲಿ ನೋಂದಣಿ ಮಾಡಿದಲ್ಲಿ ಎರಡು ಪರ್ಸೆಂಟ್ ಬಡ್ಡಿದರದಲ್ಲಿ ಒಂದು ಕೋಟಿಯವರೆಗೆ ಸಾಲ ಸೌಲಭ್ಯ.

ಇಂತಹ ಜನಪರವಾದ ಯೋಜನೆಗಳನ್ನು ಜಾರಿಗೆ ತರಲು ಹೊರಟಿರುವ ಕೇಂದ್ರ ಸರಕಾರದ ಕ್ರಮಕ್ಕೆ ಸಧನದಲ್ಲಿ ಮೆಚ್ಚುಗೆ ದೊರೆಯಿತು. ಅಲ್ಲದೆ ಬಹುದಿನದ ಬೇಡಿಕೆಯಾದ ಆದಾಯ ತೆರಿಗೆ ಮಿತಿಯ ವಿಸ್ತರಣೆ ಬೇಡಿಕೆಗೆ ಐದು ಲಕ್ಷ ವಿನಾಯಿತಿ ಘೋಷಿಸಿದ ವೇಳೆಯಲ್ಲಿ ಏನ್ಡಿಎ ಮಿತ್ರ ಪಕ್ಷದ ಸದಸ್ಯರು ಒಂದು ನಿಮಿಷಗಳ ಕಾಲ ಟೇಬಲ್ ಬಡಿಯುತ್ತ ಮೋದಿ ಮೋದಿ ಎಂದು ಘೋಷಣೆ ಕೂಗಿದ್ದಾರೆ. ಸಧನದಲ್ಲಿ ಮೋದಿಯ ಜಯಘೋಷ ಕೇಳಿದ ಪ್ರತಿಪಕ್ಷಗಳು ಒಂದು ಕ್ಷಣ ಬೆಚ್ಚಿ ಬಿದ್ದದ್ದಂತು ಸುಳ್ಳಲ್ಲ….

ಇದನ್ನೂ ಓದಿರಿ : ಟಾಪ್ 20 ಭ್ರಷ್ಟಾಚಾರ ರಾಷ್ಟ್ರಗಳ ಪಟ್ಟಿಯಿಂದ ಹೊರಬಂದ ಭಾರತ

Image Copyright : google.com

LEAVE A REPLY

Please enter your comment!
Please enter your name here