ಶುಂಠಿ, ಪುದಿನ ಹಾಕಿದ ಟೀ ಕುಡಿದ್ರೆ, ರೋಗನಿರೋಧಕ ಶಕ್ತಿ ಹೆಚ್ಚುತ್ತೆ

ಈಗೀನ ಕೋವಿಡ್ ವೈರಸ್ ಹರಡಿರುವ ಟೈಮ್ ನಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ನಾವು ಇಂತಹ ಚಹಾವನ್ನು ಸೇವನೆಮಾಡುವುದು ಬಹುಮುಖ್ಯವಾಗಿದೆ. ನಮ್ಮ ದೇಹವನ್ನು ಚೈತನ್ಯ ಪೂರ್ಣಗೊಳಿಸಿ, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಶುಂಠಿ, ಚಕ್ಕೆ, ಪುದಿನ, ಲವಂಗ ಮುಂತಾದವುಗಳನ್ನು ದಿನನಿತ್ಯ ಸೇವಿಸುವುದು ಆರೋಗ್ಯಕ್ಕೆ ಒಳ್ಳೆಯದು.

homemade-ginger-mint-leaves-herbal-tea-to-boost-immunity

ಈಗೀನ ಕೋವಿಡ್ ವೈರಸ್ ಹರಡಿರುವ ಟೈಮ್ ನಲ್ಲಿ ಎಷ್ಟು ಮುನ್ನೆಚ್ಚರಿಕೆ ಕ್ರಮ ವಹಿಸಿದರೂ ಕಡಿಮೆಯೇ ಅಲ್ಲವೇ.. ಹಾಗಾಗಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ನಾವು ಇಂತಹ ಚಹಾವನ್ನು ಸೇವನೆಮಾಡುವುದು ಬಹುಮುಖ್ಯವಾಗಿದೆ. ನಮ್ಮ ದೇಹವನ್ನು ಚೈತನ್ಯ ಪೂರ್ಣಗೊಳಿಸಿ, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಶುಂಠಿ, ಚಕ್ಕೆ, ಪುದಿನ, ಲವಂಗ ಮುಂತಾದವುಗಳನ್ನು ದಿನನಿತ್ಯ ಸೇವಿಸುವುದು ಆರೋಗ್ಯಕ್ಕೆ ಒಳ್ಳೆಯದು. ಇವುಗಳನ್ನು ಬಳಸಿ ಮಾಡಬಹುದಾದ ಶುಂಠಿ, ಪುದಿನ ಹಾಕಿದ ಟೀ ಯೊಂದಿಗೆ ನಾವಿಂದು ನಿಮ್ಮ ಮುಂದೆ ಬಂದಿದ್ದೇವೆ.

ನಾವು ಯಾವಾಗಲು ಚಹಾವನ್ನು ಕುಡಿಯುತ್ತ ಇರುತ್ತೇವೆ. ಕೇವಲ ಚಹಾವನ್ನು ಸೇವನೆ ಮಾಡುವ ಬದಲು, ಅದರ ಜೊತೆಗೆ ಶುಂಠಿ, ಚಕ್ಕೆ, ಲವಂಗ, ಏಲಕ್ಕಿ, ಪುದಿನ ಇವುಗಳನ್ನು ಸೇರಿಸುವುದು ಆರೋಗ್ಯಕ್ಕೆ ಉತ್ತಮವಾಗಿರುತ್ತದೆ. ಈ ಟೀ ಕುಡಿಯುವುದರಿಂದ ದಿನವಿಡೀ ಕಾಡುವ ದಣಿವು ಸಮಸ್ಯೆಯನ್ನು ನಿವಾರಿಸಬಹುದು. ಸುಲಭವಾಗಿ ತಯಾರಿಸಬಹುದಾದ ಈ ಚಹದ ಕುರಿತು ತಿಳಿಯೋಣ ಬನ್ನಿ..

ಇದನ್ನೂ ಓದಿರಿ: ಪಿತ್ತ ದೋಷ ಸಮಸ್ಯೆ ನಿವಾರಣೆಗೆ ಪರಿಣಾಮಕಾರಿ ಮನೆಮದ್ದುಗಳು

ಬೇಕಾಗುವ ಸಾಮಗ್ರಿಗಳು :

  • ಶುಂಠಿ
  • ಚಕ್ಕೆ ಪುಡಿ
  • ಲವಂಗ ಪುಡಿ
  • ಏಲಕ್ಕಿ ಪುಡಿ
  • ಪುದಿನ ಸೊಪ್ಪು
  • ಟೀ ಪುಡಿ
  • ಹಾಲು

ಮಾಡುವ ವಿಧಾನ:

homemade-ginger-mint-leaves-herbal-tea-to-boost-immunity-01

ಮೊದಲಿಗೆ ಟೀ ಪ್ಯಾನ್ ನಲ್ಲಿ 2 ಕಪ್ ನೀರು ಹಾಕಿ ಅದಕ್ಕೆ ಜಜ್ಜಿದ ಪುದಿನ ಸೊಪ್ಪು, ತುರಿದ ಶುಂಠಿ, ಚಕ್ಕೆ ಪುಡಿ, ಲವಂಗ ಪುಡಿ, ಏಲಕ್ಕಿ ಪುಡಿ ನಂತರ ಟೀ ಪುಡಿ ಹಾಕಿ 8-10 ನಿಮಿಷ ಕುದಿಸಬೇಕು. ಇದಕ್ಕೆ ದಿನನಿತ್ಯ ಬಳಸುವ ಯಾವುದೇ ಟೀ ಪುಡಿ ಬಳಸಬಹುದು. ಬ್ಲಾಕ್ ಟೀ ಕುಡಿಯುವ ಅಭ್ಯಾಸ ಇರುವವರು ಇದಕ್ಕೆ ಟಿ ಪುಡಿ ಸೇರಿಸಿ. ನಂತರ ಇವೆಲ್ಲವನ್ನೂ ಸೋಸಿಕೊಂಡರೆ ಚಹಾ ಸಿದ್ದವಾಯಿತು. ಇದಕ್ಕೆ ಬೇಕಾದರೆ ನಿಂಬೆ ರಸ ಸಹ ಸೇರಿಸಿ ಕುಡಿಯಬಹುದು. ಇಲ್ಲದಿದ್ದರೆ ಲಿಂಬೆಯ ಬದಲಾಗಿ ರೆಗುಲರ್ ಆಗಿ ಮಾಡುವಂತೆ ಹಾಲು ಸೇರಿಸಿಯೂ ಕುಡಿಯಬಹುದು. ಸಕ್ಕರೆ ಸೇರಿಸುವುದು ನಿಮ್ಮಿಷ್ಟ, ಬೆಕಿದ್ದಲ್ಲಿ  ಸಕ್ಕರೆ ಸೇರಿಸಿಕೊಳ್ಳಿ.

ಇದನ್ನೂ ಓದಿರಿ: ಬಂಗು, ಕಪ್ಪುಕಲೆಗಳು, ಮೊಡವೆ ಕಲೆಗಳಿಗೆ ಇಲ್ಲಿದೆ ಸುಲಭವಾದ ಮನೆಮದ್ದು

ಈ ಹರ್ಬಲ್ ಮಸಾಲ ಟೀಯಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಪದಾರ್ಥಗಳು ಇರುವುದರಿಂದ ಸಾಮಾನ್ಯ ಕಾಯಿಲೆಗಳಾದ ಶೀತ, ಕೆಮ್ಮು, ಜ್ವರ ಇಂತಹ ಸಮಸ್ಯೆಗಳಿಂದ ದೂರವಿರಬಹುದು. ಈ ಟೀಯನ್ನು ಸಾಮಾನ್ಯವಾಗಿ ಪ್ರತಿದಿನ ಸೇವನೆ ಮಾಡಬಹುದು. ಆದರೆ ಉಷ್ಣ ಪ್ರಕೃತಿಯ ದೇಹದವರು ದಿನಬಿಟ್ಟು ದಿನ ಸೇವನೆ ಮಾಡಿದರೆ ಒಳ್ಳೆಯದು. ಏಕೆಂದರೆ ಅವರಿಗೆ ದೇಹವು ಉಷ್ಣವಾಗಿ ಕೆಲ ಸಣ್ಣ ಪುಟ್ಟ ಅಡ್ಡ ಪರಿಣಾಮಗಳು ಉಂಟಾಗಬಹುದು. ಈ ಟೀಯನ್ನು ಮಾಡುವ ಸರಿಯಾದ ವಿಧಾನವನ್ನು ತಿಳಿಯಲು ಈ ಕೆಳಗಿನ ವಿಡಿಯೋವನ್ನು ನೋಡಿ…

LEAVE A REPLY

Please enter your comment!
Please enter your name here