ಗಜಕರ್ಣ, ಸೋರಿಯಾಸಿಸ್ ನಂತಹ ಗಂಭೀರ ಸಮಸ್ಯೆಗೂ ತುಂಬೆ ಗಿಡದ ಪರಿಹಾರ !

ಶೀತ, ಕಫ ಸಮಸ್ಯೆಯ ನಿವಾರಣೆಗೆ ತುಂಬೆ ಗಿಡದ ಪರಿಹಾರ

ನಮ್ಮ ಹಲವಾರು ಆರೋಗ್ಯ ಸಮಸ್ಯೆಗಳಿಗೆ ತುಂಬೆ ಗಿಡ ಪರಿಹಾರವನ್ನು ಒದಗಿಸುತ್ತದೆ. ಗಾತ್ರದಲ್ಲಿ ಚಿಕ್ಕದಾಗಿದ್ದು, ಒಂದೆರಡು ಅಡಿಗಳಷ್ಟು ಎತ್ತರಕ್ಕೆ ಬೆಳೆಯುವ ಈ ಗಿಡ ಬಿಳಿಯದಾದ ಚಿಕ್ಕ ಚಿಕ್ಕ ಹೂವುಗಳನ್ನು ಬಿಡುತ್ತದೆ. ಆದರೆ ಇದು ತನ್ನೊಡಲಲ್ಲಿ ಅಗಾಧವಾದ ಔಷಧಗಳ ಕಣಜವನ್ನೇ ಇಟ್ಟುಕೊಂಡಿದೆ. ಇದರಲ್ಲಿರುವ ಆರೋಗ್ಯ ಪ್ರಯೋಜನಗಳನ್ನು ತಿಳಿದರೆ ನೀವು ಬೆರಗಾಗುವುದರಲ್ಲಿ ಯಾವುದೇ ಸಂಶಯವಿಲ್ಲ.

ಇದರ ಬಳಕೆಯಿಂದ ಗಜಕರ್ಣ, ಸೋರಿಯಾಸಿಸ್ ನಂತಹ ಚರ್ಮ ರೋಗಗಳೂ ದೂರವಾಗುತ್ತವೆ. ಇವುಗಳನ್ನು ಹಾವು ಮತ್ತು ಚೇಳಿನ ಕಡಿತದ ವಿಷಕ್ಕೆ ಸಹ ಬಳಕೆ ಮಾಡಲಾಗುತ್ತದೆ. ನಾವು ಇಂದು ತುಂಬೆ ಗಿಡದಿಂದ ಯಾವ ರೀತಿಯಲ್ಲಿ ರೋಗಗಳನ್ನು ದೂರಮಾಡಿಕೊಳ್ಳಬಹುದು ಎನ್ನುವುದನ್ನು ನೋಡೋಣ..

ಚರ್ಮ ರೋಗ ನಿವಾರಣೆ

ತುಂಬೆ ಗಿಡದ ಬೇರು, ಕಾಂಡ, ಎಲೆಗಳನ್ನು ತೆಗೆದುಕೊಂಡು ಅದರ ರಸವನ್ನು ತಯಾರಿಸಿ ಚರ್ಮದ ಸಮಸ್ಯೆಯಿರುವ ಸ್ಥಳಗಳಿಗೆ ಲೇಪನ ಮಾಡುವುದರಿಂದ ಚರ್ಮದ ಕಾಯಿಲೆಗಳು ದೂರವಾಗುತ್ತವೆ. ಇದರ ಬದಲು ತುಂಬೆ ಗಿಡದ (ಕರಿದಿಸಿ) ಎಲೆಗಳನ್ನು ತೆಗೆದುಕೊಂಡು ಅವುಗಳ ಜೊತೆಗೆ ಬೇವಿನ ಎಲೆಗಳನ್ನು ಸೇರಿಸಿ ನೀರಿಗೆ ಹಾಕಿ ಕುದಿಸಬೇಕು. ಈ ನೀರನ್ನು ಸ್ನಾನ ಮಾಡುವುದರಿಂದಲೂ ಚರ್ಮ ರೋಗಗಳಿಂದ ಮುಕ್ತಿಯನ್ನು ಪಡೆಯಬಹುದು.

ಇದನ್ನೂ ಓದಿರಿ: ರಿಂಗ್‌ವರ್ಮ್ ಸಮಸ್ಯೆಯಿಂದ ಬಳಲುತ್ತಿದ್ದೀರೆ ಹಾಗಾದರೆ ಇಲ್ಲಿದೆ ಪರಿಹಾರ..!

ತುಂಬೆ ಗಿಡದಿಂದ ಶೀತ, ಕಫ ಸಮಸ್ಯೆಯ ನಿವಾರಣೆ

ಶೀತ, ಕಫ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದರೆ ಒಂದು ಹಿಡಿ ತುಂಬೆ ಹೂವನ್ನು ತೆಗೆದುಕೊಂಡು ಅದರ ರಸವನ್ನು ತಯಾರಿಸಿಕೊಳ್ಳಬೇಕು. ಈ ರಸಕ್ಕೆ ಜೇನುತುಪ್ಪವನ್ನು ಸೇರಿಸಿ ಕಾಲಿ ಹೊಟ್ಟೆಯಲ್ಲಿ ಬೆಳಗಿನ ಜಾವ ತೆಗೆದುಕೊಳ್ಳುವುದರಿಂದ ಶೀಗ್ರವೇ ನಿವಾರಣೆ ದೊರೆಯುತ್ತದೆ.

ಶೀತ, ಕಫ ಸಮಸ್ಯೆಯ ನಿವಾರಣೆಗೆ ತುಂಬೆ ಗಿಡದ ಪರಿಹಾರ

ತುಂಬೆ ಗಿಡದಿಂದ ಅಜೀರ್ಣ ಸಮಸ್ಯೆಯ ನಿವಾರಣೆ

ಅಜೀರ್ಣ ಸಮಸ್ಯೆಯಿಂದ ಬಳಲುವವರು ತುಂಬೆ ಗಿಡದ ಔಷಧ ತೆಗೆದುಕೊಳ್ಳುವುದರಿಂದ ಜೀರ್ಣಕ್ರೀಯೆ ಸುಲಭವಾಗಿ ಆಗುವಂತೆ ಮಾಡಿಕೊಳ್ಳಬಹುದು. ತುಂಬೆ ಗಿಡದ ಹೂವುಗಳನ್ನು ತೆಗೆದುಕೊಂಡು ನೀರಿಗೆ ಹಾಕಿ ಚೆನ್ನಾಗಿ ಕುದಿಸಬೇಕು. ಕುದಿಸಿದ ಈ ನೀರಿಗೆ ಸ್ವಲ್ಪ ಉಪ್ಪನ್ನು ಹಾಕಿ ಕುಡಿಯುವುದರಿಂದ ಶೀಗ್ರವೇ ಅಜೀರ್ಣ ಸಮಸ್ಯೆ ದೂರವಾಗುತ್ತದೆ.

ಋತುಚಕ್ರದ ಸಮಸ್ಯೆಗಳ ನಿವಾರಣೆ

ಸ್ತ್ರೀಯರಲ್ಲಿ ಕಾಡುವ ಋತುಚಕ್ರದ ಸಮಸ್ಯೆಗಳಾದ ಅತಿಯಾದ ರಕ್ತಸ್ರಾವ ಹಾಗೂ ಹೊಟ್ಟೆನೋವಿನ ತೊಂದರೆಗೆ ತುಂಬೆ ಗಿಡದ ಎಲೆಗಳ ಪೇಸ್ಟ್ ತಯಾರಿಸಿಕೊಂಡು ಅದಕ್ಕೆ ನಿಂಬೆರಸ ಮತ್ತು ಎಳ್ಳೆಣ್ಣೆ ಸೇರಿಸಿ ಕುಡಿಯುವುದರಿಂದ ನಿವಾರಣೆ ದೊರೆಯುತ್ತದೆ.

ಇದನ್ನೂ ಓದಿರಿ: ಮಳೆಗಾಲದಲ್ಲಿ ಅನುಸರಿಸಬೇಕಾದ ಆಹಾರ ಕ್ರಮಗಳು ಮತ್ತು ಜೀವನ ಶೈಲಿಯ ಕುರಿತು ಆಯುರ್ವೇದದ ಸಲಹೆಗಳು

ತುಂಬೆ ಗಿಡದಿಂದ ಬಾಯಾರಿಕೆ ಸಮಸ್ಯೆ ನಿವಾರಣೆ

ಕೆಲವೊಮ್ಮೆ ನಮಗೆ ಎಷ್ಟೇ ನೀರನ್ನು ಕುಡಿದರೂ ಬಾಯಾರಿಕೆಯ ಸಮಸ್ಯೆ ದೂರವಾಗುವುದಿಲ್ಲ. ಅಂತಹ ಸಮಯದಲ್ಲಿ ತುಂಬೆ ಗಿಡದ ಕಷಾಯವನ್ನು ಮಾಡಿಕೊಂಡು ಕುಡಿಯಬೇಕು. ಇದರಿಂದ ನಮ್ಮ ಬಾಯಾರಿಕೆಯ ತೊಂದರೆ ಬೇಗನೆ ನಿವಾರಣೆ ದೊರೆಯುತ್ತದೆ.

ಶೀತ, ಕಫ ಸಮಸ್ಯೆಯ ನಿವಾರಣೆಗೆ ತುಂಬೆ ಗಿಡ ದ ಪರಿಹಾರ

ತುಂಬೆ ಗಿಡ ಜ್ವರ ನಿವಾರಣೆಗೆ ಸಹಕಾರಿ

ನಿಮ್ಮನ್ನು ಪದೇ ಪದೆ ಜ್ವರ ಕಾಡುತ್ತಿದ್ದರೆ ತುಂಬೆ ಗಿಡದಿಂದ ಪರಿಹಾರ ಸಿಗಬಹುದು. ತುಂಬೆ ಗಿಡದಲ್ಲಿ ಜ್ವರ ನಿವಾರಿಸುವ ಗುಣಗಳಿವೆ. ತುಂಬೆ ಗಿಡದ ಎಲೆಗಳನ್ನು ತೆಗೆದುಕೊಂಡು ರಸ ತೆಗೆಯಬೇಕು. ಅದಕ್ಕೆ ಒಂದೆರಡು ಕಾಳು ಮೆಣಸನ್ನು ಹಾಕಿ, ಪುಡಿ ಮಾಡಿ ಸೇವನೆ ಮಾಡುವುದರಿಂದ ನಿವಾರಣೆಯು ದೊರೆಯುವುದು.

ಮಕ್ಕಳಲ್ಲಿ ಜಂತು ಹುಳ ನಿವಾರಣೆಗೆ ತುಂಬೆ ಗಿಡ

ತುಂಬೆ ಗಿಡ ಚಿಕ್ಕ ಗಿಡವಾಗಿದ್ದರೂ ಅದರ ಆರೋಗ್ಯಕರ ಲಾಭಗಳು ಬಹಳ ದೊಡ್ಡದಾಗಿಯೇ ಇದೆ. ಈ ಗಿಡವನ್ನು ಚಿಕ್ಕ ಮಕ್ಕಳಲ್ಲಿ ಕಾಡುವ ಜಂತು ಹುಳ ನಿವಾರಣೆಗೆ ಬಳಕೆ ಮಾಡಲಾಗುತ್ತದೆ. ಈ ಗಿಡದ ಎಲೆ ಮತ್ತು ಹೂವುಗಳನ್ನು ಚೆನ್ನಾಗಿ ಸ್ವಚ್ಛಗೊಳಿಸಿಕೊಂಡು ಜಜ್ಜಿ ರಸವನ್ನು ತೆಗೆದುಕೊಳ್ಳಬೇಕು. ಈ ತಯಾರಿಸಿಕೊಂಡ ರಸಕ್ಕೆ 1 ಸಣ್ಣ ಚಮಚ ಜೇನುತುಪ್ಪ ಸೇರಿಸಿ ಚೆನ್ನಾಗಿ ಮಿಶ್ರ ಮಾಡಿಕೊಳ್ಳಬೇಕು. ಅದನ್ನು ಮಕ್ಕಳಿಗೆ ಕುಡಿಸುವುದರಿಂದ ಜಂತುಹುಳ ನಿವಾರಣೆಯಾಗುತ್ತದೆ.

ತುಂಬೆ ಗಿಡ ರಕ್ತ ಶುದ್ಧಿಗೆ ಸಹಕಾರಿ

ಆಯುರ್ವೇದದಲ್ಲಿ ರಕ್ತ ಶುದ್ಧಿಗೆ ತುಂಬೆ ಗಿಡವನ್ನು ಸಹ ಬಳಕೆ ಮಾಡಲಾಗುತ್ತದೆ. ತುಂಬೆ ಗಿಡವನ್ನು ನೆರಳಿನಲ್ಲಿ ಒಣಗಿಸಿ ಅದರ ಪುಡಿಯನ್ನು ಮಾಡಿಟ್ಟುಕೊಳ್ಳಬೇಕು. ಈ ಪುಡಿಯನ್ನು ಹಾಕಿ ಕಷಾಯವನ್ನು ಮಾಡಿ ಸೇವಿಸುತ್ತಿರುವುದರಿಂದ ರಕ್ತವು ಶುದ್ಧಿಯಾಗುತ್ತದೆ. ಇದು ತುಂಬಾ ಪರಿಣಾಮಕಾರಿಯಾಗಿದ್ದು, ರಕ್ತ ವಿಕಾರದಿಂದಾಗುವ ಹಲವಾರು ರೋಗಗಳು ಇದರಿಂದಾಗಿ ನಿವಾರಣೆ ಆಗುತ್ತದೆ.

ಇದನ್ನೂ ಓದಿರಿ: ಹಾಗಲಕಾಯಿಯ ಸೇವನೆಯಿಂದ ಏನೆಲ್ಲಾ ಉಪಯೋಗಗಳಿವೆ ನಿಮಗೆ ತಿಳಿಯಬೇಕೆ ಹಾಗಾದರೆ ಓದಿ

1 COMMENT

LEAVE A REPLY

Please enter your comment!
Please enter your name here